alex Certify BIG NEWS: ಯತ್ನಾಳ್ ನಮ್ಮವರೇ, ಯಾವುದೋ ಕಾರಣಕ್ಕೆ ಆಕ್ರೋಶದಲ್ಲಿರಬಹುದು: ಯಡಿಯೂರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಯತ್ನಾಳ್ ನಮ್ಮವರೇ, ಯಾವುದೋ ಕಾರಣಕ್ಕೆ ಆಕ್ರೋಶದಲ್ಲಿರಬಹುದು: ಯಡಿಯೂರಪ್ಪ

ಶಿವಮೊಗ್ಗ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ನಮ್ಮ ಪಕ್ಷದವರೇ ಹೊರತೂ ಅವರೇನು  ಹೊರಗಿನವರಲ್ಲ. ಯಾವುದೋ ಕಾರಣಕ್ಕಾಗಿ ಆಕ್ರೋಶದಲ್ಲಿರಬಹುದು. ಆದರೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕೆನ್ನುವುದು ನನ್ನ ಅಪೇಕ್ಷೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಮತ್ತು ನನ್ನ ಅಪೇಕ್ಷೆ ಕೂಡ ಇದೇ ಆಗಿದೆ. ಏನೇ ವಿಚಾರ ಇದ್ದರೂ ಎದುರು, ಬದುರು ಕೂತುಕೊಂಡು ಮಾತನಾಡಬೇಕು. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕೆನ್ನುವುದು ನನ್ನ ಅಭಿಪ್ರಾಯ. ಇದಕ್ಕೆ ಎಲ್ಲರೂ ಸಹಕರಿಸುತ್ತಾರೆಂಬ ನಂಬಿಕೆ ಇದೆ ಎಂದರು.

ಯತ್ನಾಳ್ ಅವರು ಏನೇ ಮಾತನಾಡಲಿ ಪರವಾಗಿಲ್ಲ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕೆಂಬ ಪ್ರಾಮಾಣಿಕ ಪ್ರಯತ್ನ ನಮ್ಮದು. ಮುಂದೆ ಎಲ್ಲವೂ ಸರಿ ಹೋಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ರಾಜ್ಯ ಸರ್ಕಾರದ ದೌರ್ಬಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ನಮ್ಮೆಲ್ಲಾ ಶಾಸಕರು ಮಾಡಲಿದ್ದಾರೆ. ಸರ್ಕಾರದ ವೈಫಲ್ಯ ಹಾಗೂ ಕೊರತೆಗಳ ಬಗ್ಗೆ ಜನರ ಗಮನಕ್ಕೆ ತರುವ ಕೆಲಸ ನಮ್ಮ ಶಾಸಕರೆಲ್ಲರೂ ಮಾಡುತ್ತಾರೆ ಎಂದರು.

ಮುಡಾ ಸೇರಿದಂತೆ ಹಲವಾರು ಹಗರಣಗಳು ಈ ಸರ್ಕಾರದಲ್ಲಿ ನಡೆದಿದೆ. ಒಮ್ಮೆ ಅಪರಾಧ ಮಾಡಿದ ಮೇಲೆ ನಿವೇಶನಗಳನ್ನು ವಾಪಾಸ್ ನೀಡೋದು ಬೇರೆ ವಿಷಯ. ಆದರೆ ಸಾವಿರಾರು ನಿವೇಶನಗಳು ಕಾನೂನು ಬಾಹಿರವಾಗಿ ನೀಡಿದ್ದಾರೆಂಬ ಅಂಶ ತಿಳಿದು ಬಂದಿದೆ. ಈ ಬಗ್ಗೆ ಇಡಿ ಪುರಾವೆ ಇಲ್ಲದೇ ಮಾತನಾಡುವುದಿಲ್ಲ.‌ ಸರಿಯಾದ ತನಿಖೆ ನಡೆದರೆ ಸತ್ಯ ಹೊರಬರುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...