ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಕುಟುಂಬದ ಒಡೆತನದ ಕಲಬುರಗಿಯ ಸಿದ್ಧಸಿರಿ ಎಥನಾಲ್ ಘಟಕವನ್ನು ಏಕಾಏಕಿ ಮುಚ್ಚುವಂತೆ ಹೊರಡಿಸಿದ ಆದೇಶದ ಹಿಂದಿನ ಕಾರಣ ಬಹಿರಂಗಪಡಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಪ್ರಶ್ನಿಸಿ ಯತ್ನಾಳ್ ಅವರ ಪುತ್ರ ರಮಣಗೌಡ ಪಾಟೀಲ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠದಿಂದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಾರಣ ತಿಳಿಸಲು ಸೂಚನೆ ನೀಡಲಾಗಿದೆ.
ಘಟಕವನ್ನು ಮುಚ್ಚಿಸಲು ಏಕಾಏಕಿ ಹೇಗೆ ತೀರ್ಮಾನ ತೆಗೆದುಕೊಳ್ಳಲಾಯಿತು. ಘಟಕ ಮುಚ್ಚಲು ಕೈಗೊಂಡ ತೀರ್ಮಾನದ ಹಿಂದಿನ ಕಾರಣವನ್ನು ಜನರಿಗೆ ತಿಳಿಯಬೇಕು ಎಂದು ಹೇಳಿ ವಿಚಾರಣೆಯನ್ನು ಜೂನ್ 4ಕ್ಕೆ ಮುಂದೂಡಿದೆ.