alex Certify ಕುಮಾರಸ್ವಾಮಿ ರಹಸ್ಯ ನನ್ನ ಬಳಿ ಇದೆ, ಬಾಯಿಬಿಟ್ರೆ ಅದು ಬೇರೆಯಾಗುತ್ತೆ: ಯತ್ನಾಳ್ ಬಾಂಬ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಮಾರಸ್ವಾಮಿ ರಹಸ್ಯ ನನ್ನ ಬಳಿ ಇದೆ, ಬಾಯಿಬಿಟ್ರೆ ಅದು ಬೇರೆಯಾಗುತ್ತೆ: ಯತ್ನಾಳ್ ಬಾಂಬ್

ವಿಜಯಪುರ: ಕುಮಾರಸ್ವಾಮಿ ರಹಸ್ಯ ನನ್ನ ಬಳಿ ಇದೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ರಹಸ್ಯ ನನ್ನ ಬಳಿ ಇದೆ. ಬಾಯಿಬಿಟ್ಟರೆ ಅದು ಬೇರೆಯಾಗುತ್ತದೆ ಎಂದು ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದ್ದಾರೆ.

ವಿ. ಸೋಮಣ್ಣ ಅವರಿಗೆ ಬೆಂಗಳೂರು ಉಸ್ತುವಾರಿ ಸಚಿವ ಸ್ಥಾನ ನೀಡಬೇಕು ಎಂದು ಪ್ರಚಾರ ಸಭೆ ವೇದಿಕೆ ಮೇಲೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಯತ್ನಾಳ್ ಮನವಿ ಮಾಡಿದ್ದು, ಬಹಿರಂಗವಾಗಿಯೇ ಸೋಮಣ್ಣ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಹಳೆ ಮೈಸೂರು ಭಾಗದ ಹೊಣೆಯನ್ನು ಸೋಮಣ್ಣ ಅವರಿಗೆ ನೀಡಬೇಕು. ಸೋಮಣ್ಣ ಅವರಿಗೆ ತಾಕತ್ತಿದೆ. ಅವರು ಕೆಲಸ ಮಾಡುತ್ತಾರೆ. ಬರೀ ಬೆನ್ನುಹತ್ತಿ ಓಡಾಡುವವರಿಗೆ ಅವಕಾಶ ಕೊಡಬೇಡಿ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...