ಮಂಗಳೂರು: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಸಚಿವ ಡಿ.ವಿ. ಸದಾನಂದಗೌಡ ಹರಿಹಾಯ್ದಿದ್ದಾರೆ.
ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಇದೇ ರೀತಿಯ ನಡವಳಿಕೆ ತೋರಿಸಿದ್ದರು. ಆಗ ಪಕ್ಷದಿಂದ ಉಚ್ಛಾಟನೆ ಮಾಡಿದ್ದೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಸದಾನಂದಗೌಡ ಹೇಳಿದ್ದಾರೆ.
ಯತ್ನಾಳ್ ಅವರಿಗೆ ಮಂತ್ರಿಗಿರಿ ಬೇಕಿದೆ. ಅದಕ್ಕಾಗಿ ಇಂತಹ ವರ್ತನೆ ತೋರುತ್ತಿದ್ದಾರೆ. ಅವರನ್ನು ಕರೆದು ಸಮಾಧಾನಪಡಿಸುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ, ಇಂತಹ ಒತ್ತಡಕ್ಕೆ ಪಕ್ಷ ಯಾವುದೇ ಸೊಪ್ಪು ಹಾಕುವುದಿಲ್ಲ. ಇನ್ಮುಂದೆ ಪಕ್ಷದ ವಿರುದ್ಧ ಮಾತಾಡಿದರೆ ಯತ್ನಾಳ್ ವಿರುದ್ಧ ಕೇಂದ್ರ ನಾಯಕರು ಕ್ರಮ ಕೈಗೊಳ್ಳಲಿದ್ದಾರೆ. ಯತ್ನಾಳ್ ಅವರು ವೈಯಕ್ತಿಕವಾಗಿ ನನಗೆ ವಿರೋಧಿಯಲ್ಲ. ಅವರು ಇಂತಹ ನಡವಳಿಕೆಯನ್ನು ತಕ್ಷಣ ಬಿಡಬೇಕು ಎಂದು ಸದಾನಂದಗೌಡ ಹೇಳಿದ್ದಾರೆ.