ವಿಜಯಪುರ: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ತಾರಕಕ್ಕೇರಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ಯತ್ನಾಳ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ತಂದೆ ಯಡಿಯೂರಪ್ಪ ಅವರನ್ನೇ ಜೈಲಿಗೆ ಕಳುಹಿಸಿದವನು ವಿಜಯೇಂದ್ರ, ಆತನನ್ನು ರಾಜ್ಯಾಧ್ಯಕ್ಷ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದರು.
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅವರ ಸಹಿಯನ್ನೇ ನಕಲು ಮಾಡಿದವನು ವಿಜಯೇಂದ್ರ, ಹಾಗಾಗಿಯೇ ಯಡಿಯೂರಪ್ಪ ಜೈಲು ಸೇರಬೇಕಾಯಿತು. ತಂದೆಯನ್ನೇ ಜೈಲಿಗೆ ಕಳುಹಿಸಿದವನು ವಿಜಯೇಂದ್ರ ಎಂದು ಏಕವಚನದಲ್ಲಿ ಕಿಡಿಕಾರಿದ್ದಾರೆ.
ವಿಜಯೇಂದ್ರ ಹೊರಗಡೆಯಷ್ಟೇ ಪೂಜ್ಯ ತಂದೆಯವರು, ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡಿ ಪಕ್ಷ ಸಂಘಟನೆ ಮಾಡಿದವರು ಎಂದು ಹೇಳುತ್ತಾನೆ. ಮನೆಯಲ್ಲಿ ಮುದಿಯ ಕೂತ್ಕೋ ಎಂದು ಹೇಳುತ್ತಾನೆ. ಆತನನ್ನು ಬಿಜೆಪಿ ರಾಜ್ಯಾಧ್ಯಕ್ಷ ಎಂದು ಒಪ್ಪಲು ಸಾಧ್ಯವಿಲ್ಲ. ಯಡಿಯೂರಪ್ಪ ಮಗನ ಮೇಲಿನ ವ್ಯಾಮೋಹದಿಂದ ಮಗನ ಪರ ವಹಿಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.