
ವಿಜಯಪುರ: ಪಕ್ಷದ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಇದ್ದೇ ಇರುತ್ತದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿರುವುದು ಸರಿಯಿದೆ. ಯಾರು ಅಧ್ಯಕ್ಷರಾಗುತ್ತಾರೆ ಎಂಬುದನ್ನು ಕೇಂದ್ರಕ್ಕೆ ಬಿಡುತೇವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಈಗ ಇರುವುದು ಹಂಗಾಮಿ ಅಧ್ಯಕ್ಷರು. ಜೋಶಿ ಹೇಳಿರುವುದು ಸರಿಯಿದೆ. ಅವರು ನಮ್ಮ ಪಕ್ಷದ ನಿಯಮಗಳ ಬಗ್ಗೆ ಹೇಳಿದ್ದಾರೆ. ಅದನ್ನೂ ವಿವಾದ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದರು.
ಚುನಾವಣಾ ಆಯೋಗದ ನಿಬಂಧನೆಗಳಿವೆ. ನಿಬಂಧನೆಗಳ ಪಾಲನೆ ಮಾಡಿಕೊಂಡು ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ರಾಜ್ಯಾಧ್ಯಕ್ಷರ ಘೋಷಣೆಯಾಗುತ್ತೆ. ಜಿಲ್ಲಾ ಘಟಕದ ಅಧ್ಯಕ್ಷ ಬದಲಾವಣೆ ಕೂಡ ಆಗಲಿದೆ ಎಂದು ಹೇಳಿದರು.