ಸಂಗೀತ ಲೋಕದಲ್ಲಿ ಯಶಸ್ಸಿನ ಪಯಣದಲ್ಲಿರುವ ಯಶ್‌ರಾಜ್ ಮುಖಾತೆ ತಮ್ಮ ಜೀವನದ ಬಗ್ಗೆ ’ಹ್ಯೂಮನ್ಸ್ ಆಫ್ ಬಾಂಬೆ’ ಬಳಿ ಹೇಳಿಕೊಂಡಿದ್ದಾರೆ.
“ನನಗೆ ಮೂರು ವರ್ಷ ವಯಸ್ಸಿದ್ದಾಗ ಅಪ್ಪ ನನಗೆ ಕೀಬೋರ್ಡ್ ತಂದುಕೊಟ್ಟರು; ನಾನು ಅಂದಿನಿಂದ ಸಂಗೀತದ ಮೇಲೆ ಒಲವು ಬೆಳೆಸಿಕೊಂಡೆ. ಪ್ರತಿ ಬಾರಿ ಅವಕಾಶ ಸಿಕ್ಕಾಗೆಲ್ಲಾ ನಾನು ಅದನ್ನು ನುಡಿಸುತ್ತಿದ್ದೆ. ನನಗೆ ಸಂಗೀತಗಾರನಾಗಬೇಕೆಂಬ ಆಸೆ ಇತ್ತು. ಅಪ್ಪ ಹಾಗೂ ಅಮ್ಮ ನೆರವಿಗೆ ನಿಂತರು, ಆದರೆ ಮೊದಲು ಪದವಿ ವ್ಯಾಸಂಗ ಮುಗಿಸಬೇಕೆಂಬುದು ಅವರ ಮಾತಾಗಿತ್ತು.
ಡಿಸಿ ರೋಹಿಣಿ ಸಿಂಧೂರಿ ವಿಡಿಯೋ ವೈರಲ್, ಪಂಕ್ಚರ್ ಹಾಕಿದ ಅಧಿಕಾರಿ ಸರಳತೆಗೆ ಮೆಚ್ಚುಗೆ
ಹೀಗಾಗಿ ನಾನು ಮೊದಲಿಗೆ ಇಂಜಿನಿಯರಿಂಗ್ ಮಾಡಿದೆ; ಬೆಳಿಗ್ಗೆ ವೇಳೆ ಕಾಲೇಜ್‌ಗೆ ಹೋಗುತ್ತಿದ್ದ ನಾನು ಮನೆಗೆ ಬಂದ ಮೇಲೆ ಯೂಟ್ಯೂಬ್‌ನಲ್ಲಿ ಸಂಗೀತಕ್ಕೆ ಸಂಬಂಧಿಸಿದಂತೆ ಕಲಿಯುತ್ತಿದ್ದೆ..! ಇದಾದ ಬಳಿಕ ಹೇಗೋ ಪದವಿ ಪೂರೈಸಿದೆ. ಇದಾದ ಬಳಿಕ ನನ್ನೆಲ್ಲಾ ಶಕ್ತಿಯನ್ನು ಸಂಗೀತದೆಡೆಗೆ ಹರಿಸಿದೆ. ನನ್ನ ಬಳಿ ಸರಿಯಾದ ಉಪಕರಣಗಳೂ ಇರಲಿಲ್ಲ, ಹೀಗಾಗಿ ಡಬ್ಬಾಗಳು ಹಾಗೂ ಅಥವಾ ಚಾಕಲೇಟ್ ಪೇಪರ್‌ಗಳನ್ನು ಬಳಸಿಕೊಂಡು ನನ್ನದೇ ಸಂಗೀತದ ಉಪಕರಣಗಳನ್ನು ಉತ್ಪಾದಿಸುತ್ತಿದ್ದೆ. ಅವುಗಳನ್ನು ಬಳಸಿಕೊಂಡು ಹಾಡಿನ ಕವರ್‌ಗಳನ್ನು ಮಾಡಿ ಆನ್ಲೈನ್‌ನಲ್ಲಿ ಪೋಸ್ಟ್ ಮಾಡುತ್ತಿದ್ದೆ,” ಎಂದು ಯಶ್‌ರಾಜ್ ಹೇಳಿದ್ದಾರೆ.
ರಸೋಡಾದ ಬಳಿಕ ತಮ್ಮ ವೃತ್ತಿಯ ಗ್ರಾಫ್ ಹೇಗೆ ಬದಲಾಯಿತು ಎಂದು ಈ ಸಂದರ್ಶನದಲ್ಲಿ ಯಶ್‌ರಾಜ್ ಹೇಳಿಕೊಂಡಿದ್ದಾರೆ.
https://www.instagram.com/p/CEHeALNJMjm/?utm_source=ig_web_copy_link
https://www.instagram.com/p/CLtdpw-htNh/?utm_source=ig_web_copy_link