alex Certify ರೈತರು, ಬಡಜನರಿಗೆ ಗುಡ್ ನ್ಯೂಸ್: ಏ. 1 ರಿಂದ ಯಶಸ್ವಿನಿ ಯೋಜನೆ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರು, ಬಡಜನರಿಗೆ ಗುಡ್ ನ್ಯೂಸ್: ಏ. 1 ರಿಂದ ಯಶಸ್ವಿನಿ ಯೋಜನೆ ಜಾರಿ

ಹುಬ್ಬಳ್ಳಿ: ರೈತರು ಮತ್ತು ಬಡಜನರಿಗೆ ಉಪಯುಕ್ತವಾಗಿದ್ದ ಆರೋಗ್ಯ ವಿಮೆ ‘ಯಶಸ್ವಿನಿ ಯೋಜನೆ’ ಏಪ್ರಿಲ್ 1 ರಿಂದ ಮತ್ತೆ ಆರಂಭವಾಗಲಿದೆ. ಐದು ವರ್ಷಗಳ ಹಿಂದೆ ಯಶಸ್ವಿನಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯಶಸ್ವಿನಿ ಯೋಜನೆಗೆ ಏಪ್ರಿಲ್ 1 ರಂದು ಚಾಲನೆ ನೀಡಲಿದ್ದಾರೆ. ಅಲ್ಲದೇ, ಹಾಲು ಉತ್ಪಾದಕರ ಅನುಕೂಲಕ್ಕಾಗಿ ದೇಶದಲ್ಲೇ ಮೊದಲ ಬಾರಿಗೆ ಸ್ಥಾಪನೆ ಮಾಡಲಾದ ಕ್ಷೀರ ಸಮೃದ್ಧಿ ಬ್ಯಾಂಕ್ ಲೋಗೋ ಬಿಡುಗಡೆ ಮಾಡಲಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಏ. 1 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರು ಜನಪ್ರಿಯ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಗೆ ಚಾಲನೆ ನೀಡಲಿದ್ದಾರೆ. ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆಯಿಂದ ರೈತರ ಆದಾಯ ಹೆಚ್ಚಳದ ಜೊತೆಗೆ ಹೈನುಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿ ಆಗಲಿದೆ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...