
ಹಾಸನ: ರೈತರ ಜಮೀನಿನಲ್ಲಿ ರಸ್ತೆ ನಿರ್ಮಾಣ ಬೇಡವೆಂದು ನಟ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದು, ಇದರಿಂದಾಗಿ ಗ್ರಾಮಸ್ಥರು ಮತ್ತು ಯಶ್ ಕುಟುಂಬದವರ ನಡುವಿನ ರಸ್ತೆ ನಿರ್ಮಾಣ ವಿವಾದ ಸುಖಾಂತ್ಯ ಕಂಡಿದೆ.
ಹಾಸನ ತಾಲೂಕಿನ ತಿಮ್ಲಾಪುರ ಗ್ರಾಮದಲ್ಲಿ ಯಶ್ ಅವರ ಜಮೀನಿಗೆ ರಸ್ತೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಚ್ 9 ರಂದು ಗಲಾಟೆ ನಡೆದಿತ್ತು. ಘಟನೆಯ ನಂತರದಲ್ಲಿ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡ ಯಶ್ ಅವರು, ರೈತರ ಜಮೀನಿನಲ್ಲಿ ರಸ್ತೆ ನಿರ್ಮಾಣ ಬೇಡವೆಂದು ಹೇಳಿದ್ದಾರೆ.
ಈಗಾಗಲೇ ರೈತರು ದಾರಿ ಬಿಟ್ಟಿದ್ದು ಅದರ ಮೂಲಕವೇ ಜಮೀನಿಗೆ ತೆರಳಬಹುದು. ಈ ವಿಚಾರವನ್ನು ಗ್ರಾಮಸ್ಥರಿಗೆ ತಿಳಿಸಿ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳುವಂತೆ ತಮ್ಮ ಮ್ಯಾನೇಜರ್ ಗೆ ತಿಳಿಸಿದ್ದಾರೆ. ಅಂತೆಯೇ ಗ್ರಾಮಕ್ಕೆ ಆಗಮಿಸಿದ ಮ್ಯಾನೇಜರ್ ಕಾಲಭೈರವೇಶ್ವರ ದೇವಾಲಯದ ಆವರಣದಲ್ಲಿ ಎರಡೂ ಕಡೆಯವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸಮಸ್ಯೆ ಬಗೆಹರಿದಿದೆ ಎನ್ನಲಾಗಿದೆ.