
ಯಮುನಾ ನಗರ ಜಿಲ್ಲಾ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವಿಡಿಯೋದಲ್ಲಿ ಕಂಡು ಬರುವಂತೆ ನ್ಯಾಯಾಧೀಶರ ಕೊಠಡಿಯ ಎದುರಿಗೆ ಈ ವ್ಯಕ್ತಿ ನಿಂತಿರುತ್ತಾನೆ. ಆತನ ಕೈಯಲ್ಲಿ ಕೋಲು ಸಹ ಇರುತ್ತದೆ.
ಏಕಾಏಕಿ ಒಳಗೆ ನುಗ್ಗಿದ ಆತ ನ್ಯಾಯಾಧೀಶರ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದು, ಅವರೂ ಕೂಡ ಪ್ರತಿರೋಧ ತೋರಿದ್ದಾರೆ. ಅಂತಿಮವಾಗಿ ಸ್ಥಳದಲ್ಲಿದ್ದ ಕೆಲವರು ಮಧ್ಯಪ್ರವೇಶಿಸಿ ಬಿಡಿಸಿದ್ದಾರೆ. ಈ ಘಟನೆ ಯಾವಾಗ ನಡೆದಿದೆ ಎಂಬುದು ಖಚಿತವಾಗಿಲ್ಲ. ಆದರೆ ಜಿತೇಂದ್ರ ಪ್ರತಾಪ್ ಸಿಂಗ್ ಎಂಬವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.