ಚಂಡಿಗಢ: ಹರಿಯಾಣದ ಯಮುನಾ ನಗರದ ಸಮೀಪದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ನೇಪಾಳ ಮೂಲದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
ಗಂಡನೊಂದಿಗೆ ತೋಟದ ಮನೆಯಲ್ಲಿದ್ದ ಮಹಿಳೆ ಮೇಲೆ ಎರಗಿದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಗುರುವಾರ ರಾತ್ರಿ ಘಟನೆ ನಡೆದಿದೆ. ಗಂಡನನ್ನು ಹಗ್ಗದಿಂದ ಕಟ್ಟಿ ಹಾಕಿದ ಆರೋಪಿಗಳು ಮಹಿಳೆಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದಾರೆ. ನಾಲ್ವರ ನಂತರ 5ನೇ ಆರೋಪಿ ಅತ್ಯಾಚಾರಕ್ಕೆ ಮುಂದಾಗುತ್ತಿದ್ದಂತೆ ಆತನಿಂದ ತಪ್ಪಿಸಿಕೊಂಡ ಮಹಿಳೆ ಚಾಕು ತೋರಿಸಿ ಬೆದರಿಸಿದ್ದು, ದುಷ್ಕರ್ಮಿಗಳು ಮನೆಯಿಂದ ಪರಾರಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಮತೆ ಚಚ್ರೌಲಿ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. 14 ವರ್ಷಗಳಿಂದ ಬಾಲಚೌರ್ ಗ್ರಾಮದಲ್ಲಿ ನೇಪಾಳ ಮೂಲದ ದಂಪತಿ ರೈತರೊಬ್ಬರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಅಲ್ಲಿಯೇ ವಾಸವಾಗಿದ್ದಾರೆ. ಗುರುವಾರ ರಾತ್ರಿ 5 ಮಂದಿ ಮನೆಗೆ ನುಗ್ಗಿದ್ದು, ಗಂಡನನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಆತನನ್ನು ಹಗ್ಗದಿಂದ ಕಟ್ಟಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ. 5 ನೇ ಆರೋಪಿ ಬಂದಾಗ ಮಹಿಳೆ ಚಾಕು ತೋರಿಸಿದ್ದಾಳೆ. ನಂತರದಲ್ಲಿ ಅವರೆಲ್ಲ ಪರಾರಿಯಾಗಿದ್ದಾರೆ.
ಗಂಡನನ್ನು ಹಗ್ಗದಿಂದ ಬಿಡಿಸಿದ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎಂದು ಚಚ್ರೌಲಿ ಠಾಣೆಯ ಉಸ್ತುವಾರಿ ಪೃಥ್ವಿ ಸಿಂಗ್ ತಿಳಿಸಿದ್ದು, ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.