alex Certify Big News: ದೇಶದ ಮೊದಲ ಎಲೆಕ್ಟ್ರಿಕ್​ ಹೈವೇ ಶೀಘ್ರದಲ್ಲೇ ಲೋಕಾರ್ಪಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ದೇಶದ ಮೊದಲ ಎಲೆಕ್ಟ್ರಿಕ್​ ಹೈವೇ ಶೀಘ್ರದಲ್ಲೇ ಲೋಕಾರ್ಪಣೆ

ಕಳೆದ ವರ್ಷದಲ್ಲಿ ಕೇಂದ್ರ ಸರ್ಕಾರವು ಮೋರಿಸ್​ ಗ್ಯಾರೇಜಸ್​ ಸಹಭಾಗಿತ್ವದಲ್ಲಿ ದೆಹಲಿ ಹಾಗೂ ಆಗ್ರಾ ನಡುವಿನ ಇ ಹೈವೇ ಯಮುನಾ ಎಕ್ಸ್​​​ಪ್ರೆಸ್​​​ ವೇನ ಪ್ರಾಯೋಗಿಕ ಓಡಾಟ ನಡೆಸಿತ್ತು. ಯಮುನಾ ಎಕ್ಸ್​​ಪ್ರೆಸ್​ ವೇನ ಪ್ರಾಯೋಗಿಕ ಚಾಲನೆಯು ಯಶಸ್ವಿಯಾಗಿದೆ. ಈ ಪ್ರಾಯೋಗಿಕ ಪರೀಕ್ಷೆಯಲ್ಲಿ ಚಾರ್ಜಿಂಗ್​​ ಮೂಲ ಸೌಕರ್ಯ ಹಾಗೂ ಪ್ರವಾಸಿ ಮಾರ್ಗದಲ್ಲಿ ರಸ್ತೆಯ ಬದಿಯ ಸಹಾಯ ಸೇವೆಗಳನ್ನು ಕೇಂದ್ರೀಕರಿಸಲಾಗಿತ್ತು.

ವರದಿಯ ಪ್ರಕಾರ ಕೇಂದ್ರ ಸರ್ಕಾರವು ಡಿಸೆಂಬರ್​ 25ರ ಒಳಗಾಗಿ ಸಾರ್ವಜನಿಕರಿಗೆ ವಿದ್ಯುತ್​ ಕಾರಿಡಾರ್​​ನ್ನು ಮುಕ್ತಗೊಳಿಸಲು ಯೋಚಿಸುತ್ತಿದೆ ಎನ್ನಲಾಗಿದೆ. ಅಂದಹಾಗೆ ಯಮುನಾ ಎಕ್ಸ್​ಪ್ರೆಸ್​ ವೇ ದೇಶದ ಮೊದಲ ಹಸಿರ ಕಾರಿಡಾರ್​ ಆಗಿದೆ. ನೋಯ್ಡಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ. ಉತ್ತರ ಪ್ರದೇಶ ಸರ್ಕಾರವು ನೋಯ್ಡಾ ವಿಮಾನ ನಿಲ್ದಾಣದ ಮೂಲಕ ಅನೇಕ ನಗರಗಳನ್ನು ಸಂಪರ್ಕಿಸುವ ಯೋಜನೆ ಹೊಂದಿದೆ. ಹೀಗಾಗಿ ಯಮುನಾ ಎಕ್ಸ್​ಪ್ರೆಸ್​​​ ವೇ ಕಾರ್ಯಾರಂಭಕ್ಕೂ ತಯಾರಿ ನಡೆದಿದೆ ಎನ್ನಲಾಗಿದೆ.

ದೆಹಲಿ ಹಾಗೂ ಎನ್​ಸಿಆರ್​​ ನಡುವಿನ ವಿದ್ಯುತ್​ ಕಾರಿಡಾರ್​​ನಲ್ಲಿ ಸರ್ಕಾರ ಹಾಗೂ ಕಾರು ತಯಾಕರು ಬಹುಚಾರ್ಜಿಂಗ್​ ಸ್ಟೇಷನ್​ಗಳನ್ನು ಹೊಂದಿದ್ದಾರೆ. ಆಗ್ರಾದಲ್ಲಿ ಸೀಮಿತ ಚಾರ್ಜರ್​ಗಳ ಸೇವೆ ಮಾತ್ರ ಇದೆ. ಇವುಗಳಲ್ಲಿ ಒಂದು ಎಂಜಿ ಮೋಟಾರ್​ ಸ್ಥಾಪಿಸಿದೆ. ಸರ್ಕಾರಿ ಹಾಗೂ ಖಾಸಗಿ ಕಂಪನಿಗಳೂ ಇಲ್ಲಿ ಚಾರ್ಜಿಂಗ್​ ಸ್ಟೇಷನ್​ಗಳನ್ನು ಸ್ಥಾಪಿಸುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...