
ರಸ್ತೆ ಗುಂಡಿಯಿಂದ ಬೇಸತ್ತ ಜನ ಸುಸ್ಥಿತಿಯ ರಸ್ತೆಗಾಗಿ ಒತ್ತಾಯಿಸಿ ಪ್ರತಿಭಟಿಸುವಾಗ “ಯಮರಾಜ” ಕೂಡ ಸಾಥ್ ಕೊಟ್ಟಿದ್ದಾನೆ.
ಈ ಘಟನೆ ನಡೆದಿರುವುದು ಬೆಂಗಳೂರಿನ ಕನಕಪುರ ರಸ್ತೆಯಲ್ಲಿ. ಅಂಜನಾಪುರ ನಿವಾಸಿಗಳು ತಮ್ಮ ಪ್ರದೇಶದಲ್ಲಿನ ಗುಂಡಿಗಳ ಸಮಸ್ಯೆಯನ್ನು ಹೈಲೈಟ್ ಮಾಡಲು ಯಮ ದೇವರನ್ನು ಆಹ್ವಾನಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಒಬ್ಬ ವ್ಯಕ್ತಿ ‘ಯಮ ಧರ್ಮರಾಜ’ ವೇಷದೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿಡಿಯೋ ವೈರಲ್ ಆಗಿದ್ದು, ಆತ ಕಳಪೆ ರಸ್ತೆ, ಹೊಂಡಗಳ ಕಡೆಗೆ ತೋರಿಸುವುದನ್ನು ಆ ಕ್ಲಿಪ್‌ನಲ್ಲಿ ಕಾಣಬಹುದು.
ಹಿಂದೆ ನಾವು ಪ್ರತಿಭಟನೆ ನಡೆಸಿದ್ದೆವು, ಅದು ಫಲ ನೀಡಿತು. 13 ಕಿಮೀ ರಸ್ತೆಗೆ 25 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರೂ ಕೇವಲ ಎರಡು ಕಿಲೋಮೀಟರ್ ರಸ್ತೆ ಡಾಂಬರೀಕರಣವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರದ ಗಮನ ಸೆಳೆಯಲು ಯಮರಾಜ್‌ನ ಕಲ್ಪನೆ ಆರಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.