ರೇಸಿಂಗ್ ಥೀಂನ ಬೈಕುಗಳ ಟ್ರೆಂಡ್ ಎಲ್ಲೆಲ್ಲೂ ಸದ್ದು ಮಾಡುತ್ತಿರುವ ನಡುವೆ ಇಂಥದ್ದೇ ಹೊಸ ಬೈಕ್ ಒಂದನ್ನು ಇಂಡಿಯಾ ಯಮಹಾ ಮೋಟರ್ ಬಿಡುಗಡೆ ಮಾಡಿದೆ.
ವೈಜ಼ಡ್‌ಎಫ್-ಆರ್15ಎಸ್ ವಿ3 ಹೆಸರಿನ ಈ ಬೈಕ್ ಅನ್ನು ವೈಜ಼ಡ್‌ಎಫ್-ಆರ್15ಎಸ್ ವಿ4 ಮಾಡೆಲ್‌ನೊಂದಿಗೆ ಲಾಂಚ್ ಮಾಡಲಾಗುವುದು. ಬೈಕ್‌ನ ಆರಂಭಿಕ ಬೆಲೆಯು (ಎಕ್ಸ್‌ಶೋರೂಂ) 1,57,600 ರೂ. ಗಳಿರಲಿದೆ. ವೈಜ಼ಡ್‌ಎಫ್-ಆರ್15ಎಸ್ ವಿ4ನ ಆರಂಭಿಕ ಬೆಲೆ 1,70,800 ರೂ. ಗಳಿದೆ.
ಈ ಬೈಕುಗಳಿಗೆ ಮಾನ್ಸ್‌ಟರ್ ಎನರ್ಜಿ ಹಾಗೂ ಮೋಟೋ ಜಿಪಿ ಬಣ್ಣಗಳ ಎಡಿಶನ್‌ಗಳನ್ನೂ ಸಹ ಕೊಡಲಾಗಿದೆ.
ರೋಹಿತ್ ಶರ್ಮಾ ನಾಯಕತ್ವಕ್ಕೆ ಅಭಿಮಾನಿಗಳು ಫುಲ್ ಖುಷ್: 9 ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ಮತ್ತೆ ವೈರಲ್
ವೈಜ಼ಡ್‌ಎಫ್-ಆರ್15ಎಸ್ ವಿ3 ಬೈಕ್‌ಗೆ 155ಸಿಸಿ, 4-ಸ್ಟ್ರೋಕ್, ಲಿಕ್ವಿಡ್-ಕೂಲಿಂಗ್, 4-ವಾಲ್ವ್ ಇಂಜಿನ್ ನೀಡಲಾಗಿದ್ದು, 10,000 ಆರ್‌ಪಿಎಂನಲ್ಲಿ 18.6 ಪಿಎಸ್‌ನ ಗರಿಷ್ಠ ಬಲ ನೀಡಲಾಗಿದೆ. ಆರು ಸ್ಪೀಡ್ ಗೇರ್ ಬಾಕ್ಸ್ ಇರುವ ಈ ಬೈಕಿನಲ್ಲಿ, ಬಹುವಿಧದ ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಗಿಯರ್ ಶಿಫ್ಟ್ ಇಂಡಿಕೇಟರ್, ಡ್ಯುಯಲ್ ಚಾನೆಲ್ ಎಬಿಎಸ್, ಅಸಿಸ್ಟ್ & ಸ್ಲಿಪ್ಪರ್ ಕ್ಲಚ್, ಸೈಡ್ ಸ್ಟಾಂಡ್, ಇಂಜಿನ್ ಕಟ್-ಆಫ್ ಸ್ವಿಚ್, ಡೆಲ್ಟಾ ಬಾಕ್ಸ್ ಫ್ರೆಂ, ಅಲ್ಯುಮಿನಿಯಂ ಸ್ವಿಂಗ್ ಆರ್ಮ್ ಹಾಗೂ ಹಿಂಬದಿಯಲ್ಲಿ 140/70-R17 ರೇಡಿಯಲ್ ಟೈರ್ ಅಳವಡಿಸಲಾಗಿದೆ.
ವೈಜ಼ಡ್‌ಎಫ್-ಆರ್15ನ ವರ್ಶನ್ 3.0 150ಸಿಸಿ ಸೂಪರ್‌ಸ್ಪೋರ್ಟ್ ವಿಭಾಗದಲ್ಲಿ ಅದಾಗಲೇ ಭಾರೀ ಯಶಸ್ಸು ಸಾಧಿಸಿರುವ ಹಿನ್ನೆಲೆಯಲ್ಲಿ, ಇದೇ ಡಿಎನ್‌ಏ ಹೊಂದಿರುವ ಈ ಹೊಸ ಬೈಕ್‌ಗಳ ಬಿಡುಗಡೆ ಬಗ್ಗೆ ಬೈಕ್ ಪ್ರಿಯರಲ್ಲಿ ಭಾರೀ ಉತ್ಸುಕತೆ ಇರುವುದಾಗಿ ಯಮಾಹಾ ಮೋಟರ್ ಇಂಡಿಯಾದ ಚೇರ್ಮನ್ ಮೋಟೋಫುಮಿ ಶಿತಾರಾ ತಿಳಿಸಿದ್ದಾರೆ.