alex Certify ಭಾರತದಲ್ಲಿ ಅತಿ ನಿರೀಕ್ಷೆಯ R3 and MT-03 ಪರಿಚಯಿಸಿದ ಯಮಾಹಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ಅತಿ ನಿರೀಕ್ಷೆಯ R3 and MT-03 ಪರಿಚಯಿಸಿದ ಯಮಾಹಾ

Yamaha R3 and MT-03 showcased at MotoGP Bharat, launch in December 2023 |  HT Auto

ಇಂಡಿಯಾ ಯಮಾಹಾ ಮೋಟರ್ (IYM) ಪ್ರೈ ಲಿ., ತನ್ನ ಅತಿನಿರೀಕ್ಷೆಯ ಮಾಡಲ್‌ಗಳ ಪರಿಚಯಿಸಿದೆ. ದಿ ಕಾಲ್ ಆಫ್ ದಿ ಬ್ಲೂ (The Call of the Blue)ಎಂಬ ತನ್ನ ಬ್ರ್ಯಾಂಡ್‌ ಪ್ರಚಾರದ ಭಾಗವಾಗಿ ಅದು, ಭಾರತದಲ್ಲಿ ಟ್ರ್ಯಾಕ್-ಕೇಂದ್ರಿತ R3 ಮತ್ತು ಸ್ಟ್ರೀಟ್ ಫೈಟರ್ MT-03 ಗಳನ್ನು ಬಿಡುಗಡೆ ಮಾಡುತ್ತಿದೆ.

ಯಮಾಹಾದ ಪೋರ್ಟ್‌ಫೋಲಿಯೋಕ್ಕೆ ಇತ್ತೀಚಿನ ಸೇರ್ಪಡೆಯಾಗಿರುವ ಎರಡೂ ಮಾಡಲ್‌ಗಳು, ಭಾರತದಲ್ಲಿ ಯುವ R15 ಮತ್ತು MT-15 ಗ್ರಾಹಕರ ಬೆಳೆಯುತ್ತಿರುವ ಮಹತ್ವಾಕಾಂಕ್ಷೆಗಳು ಪೂರೈಸುವ ಗುರಿ ಹೊಂದಿವೆ. ಹೊಚ್ಚ ಹೊಸ R3 ಮತ್ತು MT03 ಶಕ್ತಿಶಾಲಿಯಾದ 321cc ಲಿಕ್ವಿಡ್ ಕೂಲ್ಡ್, 4-ಸ್ಟ್ರೋಕ್, ಇನ್-ಲೈನ್ ಎರಡು ಸಿಲಿಂಡರ್ DOHC ಮತ್ತು 4-ವಾಲ್ವ್ ಪರ್ ಸಿಲಿಂಡರ್ ಫ್ಯುಯೆಲ್ ಇಂಜೆಕ್ಟೆಡ್ ಇಂಜಿನ್ ಹೊಂದಿದೆ. ಈ ಇಂಜಿನ್, 10,750rpmನಲ್ಲಿ 30.9 kW (42 PS) ಗರಿಷ್ಟ ಶಕ್ತಿ ಮತ್ತು 9,000rpmನಲ್ಲಿ 29.5 Nm (3 kg-m) ಗರಿಷ್ಟ ಟಾರ್ಕ್‌ ಒದಗಿಸುತ್ತದೆ. ಹೆಚ್ಚುವರಿಯಾಗಿ, ಎರಡೂ ಬೈಕ್‌ಗಳು, ಹಗುರ ತೂಕದ ಡೈಮಂಡ್ ಫ್ರೇಮ್, ಅಪ್‌ಸೈಡ್ ಡೌನ್ ಫ್ರಂಟ್ ಫೋರ್ಕ್ಸ್, ಉದ್ದನೆಯ ಸ್ವಿಂಗ್‌ಆರ್ಮ್ ಮತ್ತು ಮಾನೋ-ಕ್ರಾಸ್ ರೇರ್ ಸಸ್ಪೆನ್ಶನ್, ಮಲ್ಟಿ-ಫಂಕ್ಷನ್ LCD ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಮತ್ತು LED ಹೆಡ್‌ಲೈಟ್, ಟೇಲ್‌ಲೈಟ್ ಮತ್ತು ಟರ್ನ್ ಸಿಗ್ನಲ್ ಲೈಟ್‌ನಿಂದ ಸಜ್ಜುಗೊಂಡಿವೆ. YZR-M1ನಿಂದ ಪ್ರಬಲವಾದ ವಂಶವಾಹಿ ಲಿಂಕ್‌ಗಳಿರುವ R3, ಅತಿಕಠಿಣ ಮೋಟಾರು ಸ್ಟೈಲಿಸ್ಟ್‌ಗಳನ್ನು ಉತ್ಸಾಹಗೊಳಿಸಲು ನಿರ್ಮಾಣಗೊಂಡಿದ್ದರೆ, ತನ್ನ ದಿಟ್ಟ ಹಾಗೂ ಹಠಮಾರಿ ಕಲಾಕೃತಿ ಹೊಂದಿರುವ MT-03, ಸವಾರಿಯಲ್ಲಿ ಟಾರ್ಕ್ ಮತ್ತು ಚುರುಕುತನ ನಿರೀಕ್ಷಿಸುತ್ತಿರುವವರನ್ನು ಆಕರ್ಷಿಸುತ್ತದೆ.

R3 ಮತ್ತು MT-03 ಎರಡೂ, ಜಪಾನ್ ತಂತ್ರಜ್ಞಾನದ ನಿದರ್ಶನೀಯ ಮತ್ತು ಶಕ್ತಿ-ಭರಿತ ಹಾಗೂ ಕೌತುಕಮಯವಾದ ದ್ವಿಚಕ್ರ ವಾಹನಗಳನ್ನು ತಯಾರಿಸುವಲ್ಲಿ ಯಮಾಹಾದ ಬಹು-ದಶಕಗಳ ನೈಪುಣ್ಯತೆಯ ಮಾದರಿಗಳಾಗಿವೆ. ಭಾರತದಲ್ಲಿ ಈ ಮಾಡಲ್‌ಗಳು Completely Built-Up Units (CBUs)(ಸಂಪೂರ್ಣವಾಗಿ ನಿರ್ಮಾಣ ಮಾಡಲಾದ ಯೂನಿಟ್‌ಗಳು) ಗಳಾಗಿದ್ದು, ಯಮಾಹಾದ ಆಯ್ದ ಬ್ಲೂ ಸ್ಕ್ವೇರ್ ಡೀಲರ್‌ಶಿಪ್‌ಗಳ ಮೂಲಕ ಮಾತ್ರವಷ್ಟೇ ಲಭ್ಯವಿರುತ್ತವೆ. ಗ್ರಾಹಕರು, ಡಿಸಂಬರ್ 15ರ ನಂತರದಿಂದ ಈ ಮಾಡಲ್‌ಗಳನ್ನು ಕೇವಲ ಇಂಡಿಯಾ ಯಮಾಹಾ ಮೋಟಾರ್‌ನ ವೆಬ್‌ಸೈಟ್ https://www.yamaha-motor-india.com/ ದಲ್ಲಿ ಮಾತ್ರ ಬುಕ್ ಮಾಡಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...