ಜಪಾನ್ ಮೂಲದ ದ್ವಿಚಕ್ರ ವಾಹನಗಳ ತಯಾರಿಕಾ ಸಂಸ್ಥೆ ಯಮಹಾ, ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದ ಮಾರುಕಟ್ಟೆಗೆ ಶೀಘ್ರವೇ ಪರಿಚಯಿಸಲಿದೆ. ಈಗಾಗಲೇ ಈ ಸ್ಕೂಟರ್ ಅನ್ನು 2019ರ ಟೋಕಿಯೊ ಮೋಟಾರ್ ಪ್ರದರ್ಶನದಲ್ಲಿ ಸಾರ್ವಜನಿಕರಿಗೆ ತೋರಿಸಲಾಗಿದೆ. ಸದ್ಯಕ್ಕೆ ಈ ಸ್ಕೂಟರ್‌ಗೆ ’’ಇ01’’ ಎಂದು ಕರೆಯಲಾಗಿದೆ.
ಚೀನಾ ಮತ್ತು ತೈವಾನ್ ಮೂಲದ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಚೀನಾದ ಬಿಡಿಭಾಗಗಳಿಂದ ನಿರ್ಮಾಣಗೊಂಡಿರುವ ಸ್ಕೂಟರ್‌ಗಳಿಂದಲೇ ಸದ್ಯಕ್ಕೆ ಭಾರತದ ಮಾರುಕಟ್ಟೆ ತುಂಬಿ ಹೋಗಿದೆ. ಆದರೆ, ಜನರಿಗೆ ಭರವಸೆ ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಪೂರ್ಣ ಆಸಕ್ತಿ ಬರಿಸಲು ಈ ಸ್ಕೂಟರ್‌ಗಳಿಂದ ಸಾಧ್ಯವಾಗಿಲ್ಲ ಎನ್ನುವುದು ಗಮನಾರ್ಹ.
ಹೊಸ ಬೈಕ್ ಬಿಡುಗಡೆ ಮಾಡಿದ ಯಮಾಹಾ, ಇಲ್ಲಿದೆ ಇದರ ವಿವರ
ಹಾಗಾಗಿ ಯಮಹಾದ ಆಧುನಿಕ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ನಿರೀಕ್ಷೆಯನ್ನು ಜನರು ಹೊಂದಿದ್ದಾರೆ. ಯಮಹಾದ ಪೆಟ್ರೋಲ್ ಚಾಲಿತ ಬೈಕ್‌ಗಳು, ಸ್ಕೂಟರ್‌ಗಳು ಈಗಾಗಲೇ ಭಾರತದ ಜನರ ಮನಗೆದ್ದಿವೆ. ಚೀನಾದ ಲೀಥಿಯಂ ಆಧಾರಿತ ಎಲೆಕ್ಟ್ರಿಕ್ ಬ್ಯಾಟರಿಗಳಿಗೆ ಪರ್ಯಾಯವಾಗಿ ಜಪಾನ್‌ನಿಂದ ವಿಶ್ವಾಸಾರ್ಹ ಮತ್ತು ಅಗ್ಗದ ದರದ ಬ್ಯಾಟರಿಗಳು ಬಿಡುಗಡೆಯಾಗುವ ನಿರೀಕ್ಷೆಯನ್ನು ಭಾರತೀಯರು ಇರಿಸಿಕೊಂಡಿದ್ದಾರೆ.
ಇ01 ಸ್ಕೂಟರ್ 125 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿರಲಿದೆ. ಆದರೆ ಬ್ಯಾಟರಿಯ ರೇಂಜ್ ಬಗ್ಗೆ ಮಾಹಿತಿಗಳು ಸಿಕ್ಕಿಲ್ಲ. ಈ ಸ್ಕೂಟರ್‌ನ ಪ್ರಾಯೋಗಿಕ ಮಾಡೆಲ್ ಸದ್ಯಕ್ಕೆ ಯಮಹಾದ ಕಾರ್ಖಾನೆಯ ಬಳಿ ಕಾಣಲು ಸಿಕ್ಕಿದ್ದು, ಆಧುನಿಕ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ.