ಸ್ಪೋರ್ಟ್ಸ್ ವರ್ಗದ ಬೈಕ್ ಮತ್ತು ಸ್ಕೂಟರ್‌ಗಳ ಎಕ್ಸ್‌ಪರ್ಟ್ ಎನಿಸಿರುವ ಜಪಾನ್ ಮೂಲದ ಕಂಪನಿ ’ಯಮಹಾ’, ತನ್ನ ಹೊಸ ಸ್ಕೂಟರ್‌ಅನ್ನು ಭಾರತದ ದ್ವಿಚಕ್ರ ವಾಹನಗಳ ಮಾರುಕಟ್ಟೆಗೆ ಪರಿಚಯಿಸಿದೆ.
’ಏರಾಕ್ಸ್ 155 ಮ್ಯಾಕ್ಸಿ ಸ್ಕೂಟರ್’ ಎಂಬ ಹೆಸರಿನ ಹೊಸ ವಾಹನವನು ರೇಸಿಂಗ್ ಬ್ಲೂ ಮತ್ತು ಗ್ರೇ ವರ್ಮಿಲ್ಲಿಯಾನ್ ಬಣ್ಣಗಳಲ್ಲಿ ಲಭ್ಯವಿದೆ. 155 ಸಿಸಿ ಎಂಜಿನ್ ಸಾಮರ್ಥ್ಯ, ಗರಿಷ್ಠ 8000 ಆರ್‌ಪಿಎಂ, ಬ್ಲೂಟೂತ್ ಕನೆಕ್ಟ್ ಆ್ಯಪ್, 5.8 ಇಂಚಿನ ಎಲ್‌ಸಿಡಿ ಪರದೆ, ಎಲ್‌ಇಡಿ ಲೈಟ್‌ಗಳನ್ನು ಹೊಂದಿರುವ ವಿಶೇಷ ವಿನ್ಯಾಸದ ಸ್ಕೂಟರ್‌ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಇದರೊಂದಿಗೆ ಯಮಹಾದ ಜನಪ್ರಿಯ ಹಾಗೂ ಯುವಕರ ಹಾಟ್‌ಫೇವರೇಟ್ ಎನಿಸಿರುವ ’ಆರ್15’ ಬೈಕ್‌ನ ಹೊಸ ಮಾದರಿ ’ಆರ್15ಎಂ- ವಿ4.0’ ಕೂಡ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಸ್ಟ್ರೀಟ್ ಮತ್ತು ಟ್ರ್ಯಾಕ್ ಎಂಬ ಮೋಡ್‌ಗಳನ್ನು ಈ ಬೈಕ್ ಹೊಂದಿರುವುದು ವೈಶಿಷ್ಟ್ಯತೆಯಾಗಿದೆ. ಕರೆಗಳನ್ನು ಮಾಡುವುದು, ಎಸ್‌ಎಂಎಸ್ ಹಾಗೂ ಇತರ ಸಂದೇಶಗಳನ್ನು ಓದಲು ಕೂಡ ಅನುಕೂಲ ಮಾಡಿಕೊಡಲಾಗಿದೆ. ಪಾರ್ಕಿಂಗ್ ಸ್ಥಳದ ಮಾಹಿತಿ, ಪೆಟ್ರೋಲ್ ಬಳಕೆಯ ಮಾಹಿತಿಗಳನ್ನು ಈ ಬೈಕ್ ದಾಖಲಾಗಿಸಿಕೊಳ್ಳುತ್ತದೆ.
Good News: ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ
ಏರಾಕ್ಸ್ ಸ್ಕೂಟರ್‌ನ ಬೆಲೆಯು 1.29 ಲಕ್ಷ ರೂ. ಗಳಿಂದ ಆರಂಭವಾಗಲಿದೆ. ಹೊಸ ಆರ್15ಎಂ ಬೈಕ್‌ನ ಬೆಲೆಯು 1.77 ಲಕ್ಷ ರೂ.ನಿಂದ ಶುರುವಾಗಲಿದೆ.