ಶಾಂತಿ ಮತ್ತು ಸಾಮರಸ್ಯದ ದೇಶವಾಗಿರುವ ಜಪಾನಿನಲ್ಲಿ ಹುಟ್ಟಿದ ಬಹುರಾಷ್ಟ್ರೀಯ ಸಂಘಟಿತ ಅಪರಾಧ ಸಿಂಡಿಕೇಟ್ ಗಳ ಸದಸ್ಯರಿಗೆ “ಯಾಕುಝಾ” ಎಂಬ ಹೆಸರಿದೆ. ಜಪಾನಿನ ಮಾಧ್ಯಮಗಳು ಮತ್ತು ಪೊಲೀಸರು, ಅವರನ್ನು ‘ಬೋರ್ಯೋಕುಡಾನ್’ ಎಂದೂ ಕರೆಯುತ್ತಾರೆ.
ಅಂದರೆ ‘ಹಿಂಸಾತ್ಮಕ ಗುಂಪುಗಳು’ ಎಂದರ್ಥ. ಯಾಕುಝಾ ಕೆಲವು ಕುತೂಹಲಕಾರಿ ಗೌರವ ಸಂಹಿತೆಗಳು, ಪದ್ಧತಿಗಳು ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಅವರ ಜೀವನ ರೀತಿ, ಚಲನಚಿತ್ರ ಅಥವಾ ವೆಬ್ ಸರಣಿಯ ಕಥಾವಸ್ತುವಾಗಬಹುದು. ಈ ಲೇಖನದಲ್ಲಿ ನಿಮಗೆ ಈ ಬಹುರಾಷ್ಟ್ರೀಯ ಸಂಘಟಿತ ಅಪರಾಧ ಸಿಂಡಿಕೇಟ್ ಗಳ ಬಗ್ಗೆ ತಿಳಿಸುವ ಒಂದು ಸಣ್ಣ ಪ್ರಯತ್ನ ನಮ್ಮದು.
ಯಾಕುಝಾ ಹಾಗೂ ಆಚರಣೆಗಳು
ಯಾಕುಝಾ ಒಂದೇ ಮೂಲವನ್ನು ಹೊಂದಿದೆಯೇ ಎಂಬುದು ಖಚಿತವಾಗಿ ತಿಳಿದಿಲ್ಲವಾದರೂ, ಹೆಚ್ಚಿನ ಆಧುನಿಕ ಸಿಂಡಿಕೇಟ್ ಗಳ mid edo ಅವಧಿಯಲ್ಲಿ ಹುಟ್ಟಿಕೊಂಡ ಎರಡು ಸಾಮಾಜಿಕ ಗುಂಪುಗಳು. ಅವು ಅಕ್ರಮ ಸರಕುಗಳನ್ನು ಮಾರಾಟ ಮಾಡಿದ “ಟೆಕಿಯಾ” ಮತ್ತು ಜೂಜಾಟದಲ್ಲಿ ತೊಡಗಿಸಿಕೊಂಡಿದ್ದ “ಬಕುಟೊ”.
ಯಾಕುಝಾ ಗುಂಪಲ್ಲಿ ಕೆಲವು ವಿಚಿತ್ರ ಆಚರಣೆಗಳಿವೆ. ಅವುಗಳಲ್ಲಿ ಒಂದು, ಪ್ರಾಯಶ್ಚಿತ್ತ ಅಥವಾ ಕ್ಷಮೆಗಾಗಿ ಒಬ್ಬರ ಬೆರಳನ್ನು ಕತ್ತರಿಸುವ ಯುಬಿಟ್ಸುಮ್. ಸದಸ್ಯನು, ಮೊದಲ ಅಪರಾಧದ ನಂತರ, ತನ್ನ ಎಡ ಕಿರುಬೆರಳಿನ ತುದಿಯನ್ನು ಕತ್ತರಿಸಬೇಕಾಗುತ್ತದೆ. ಇದು ಪೋಲಿಸರಿಗೆ ಯಾಕುಝಾ ಸದಸ್ಯರನ್ನು ಕಂಡು ಹಿಡಿಯಲು ಸುಲಭವಾಗುವುದರಿಂದ ಈ ಆಚರಣೆಯನ್ನು ಈಗ ಹೆಚ್ಚು ಅನುಸರಿಸುತ್ತಿಲ್ಲ.
ಅನೇಕ ಯಾಕುಝಿಗಳು ತಮ್ಮ ದೇಹದಲ್ಲಿ ‘ಐರೆಜುಮಿ’ ಎಂದು ಕರೆಯಲ್ಪಡುವ ಹಚ್ಚೆಗಳನ್ನು ಹೊಂದಿದ್ದು ಮತ್ತು ಈ ಹಚ್ಚೆಯಾನ್ನು ಕೈಯಿಂದ ತಯಾರಿಸಿದ ಚೂಪಾದ ಬಿದಿರು ಅಥವಾ ಉಕ್ಕಿನ ಸೂಜಿಯಿಂದ ಹಾಕಲಾಗುತ್ತದೆ. ಪೂರ್ಣ ದೇಹಕ್ಕೆ ಈ ಹಚ್ಚೆಯನ್ನು ಹಾಕಿಸಿಕೊಳ್ಳುವುದರಿಂದ ಇದು ಪೂರ್ಣಗೊಳ್ಳಲು ವರ್ಷಗಳೇ ಬೇಕಾಗಬಹುದು ಮತ್ತು ಬಹಳ ನೋವನ್ನು ಅನುಭವಿಸಬೇಕಾಗುತ್ತದೆ. ಯಾಕುಝಾ ಸದಸ್ಯರು ಕಟ್ಟುನಿಟ್ಟಾದ ಗೌರವ ಸಂಹಿತೆಗಳನ್ನೂ ಹೊಂದಿದ್ದಾರೆ.
ಸುನಾಮಿ ಸಮಯದಲ್ಲಿ ಯಾಕುಝಿ ಗಳ ಸಹಾಯ
1995ರ ಕೋಬ್ ಭೂಕಂಪದಲ್ಲಿ, ಯಮಗುಚಿ-ಗುಮಿ ಯಾಕುಝಾ ಗುಂಪು ಹೆಲಿಕಾಪ್ಟರ್ ಅನ್ನು ನಿಯೋಜಿಸಿ, ವಿಪತ್ತು ಪರಿಹಾರ ಸೇವೆಗಳನ್ನು ನೀಡಿತು. ಮಾಧ್ಯಮಗಳು, ಜಪಾನಿನ ಸರ್ಕಾರದ ನಿಧಾನಗತಿಯ ಪರಿಹಾರ ಕಾರ್ಯಗಳು ಮತ್ತು ಯಾಕುಝಾ ಗುಂಪಿನ ತ್ವರಿತ ಕಾರ್ಯದೊಂದಿಗೆ ಹೋಲಿಸಿ, ಅವರನ್ನು ಶ್ಲಾಘಿಸಿದವು.
ಜಪಾನಿನಲ್ಲಿ 2011ರ ಭೂಕಂಪ ಮತ್ತು ಸುನಾಮಿಯ ನಂತರ ಯಾಕುಝಿಗಳು, ಆಹಾರ, ನೀರು, ಕಂಬಳಿ ಮತ್ತು ನೈರ್ಮಲ್ಯ ಪರಿಕರಗಳಿಂದ ತುಂಬಿದ ನೂರಾರು ಟ್ರಕ್ ಗಳನ್ನು ಅಗತ್ಯವಿರುವ ಜನರಿಗೆ ತಲುಪಿಸಿತು ಎಂದು ಹೇಳಲಾಗುತ್ತದೆ.
ಯಾಕುಝಾ ಯುಎಸ್ ನಲ್ಲೂ ಇದೆಯೇ ?
1960ರ ದಶಕದಿಂದ ಯುಎಸ್ ನಲ್ಲಿ ಯಾಕುಝಾ ಗುಂಪು ಮಹತ್ತರವಾಗಿ ಹೆಚ್ಚಾಗಿದೆ. ಅವು ಮುಖ್ಯವಾಗಿ ಹವಾಯಿಯಲ್ಲಿವೆ. ವರದಿಗಳ ಪ್ರಕಾರ, ಅವರು ಮೆಥಾಂಫೆಟಮೈನ್ ಅನ್ನು ದೇಶಕ್ಕೆ ಕಳ್ಳಸಾಗಣೆ ಮಾಡಲು ಮತ್ತು ಬಂದೂಕುಗಳನ್ನು ಜಪಾನಿಗೆ ಕಳ್ಳಸಾಗಣೆ ಮಾಡಲು, ಜಪಾನ್ ಮತ್ತು ಯುಎಸ್ ಮುಖ್ಯ ಭೂಭಾಗದ ನಡುವಿನ ನಿಲುಗಡೆ ತಾಣವಾಗಿ ಹವಾಯಿಯನ್ನು ಬಳಸುತ್ತಾರೆ. ಲಾಸ್ ಏಂಜಲೀಸ್ ಮತ್ತು ಸ್ಯಾನ್ ಫ್ರಾನ್ಸಿಸ್ಕೊ ಕೊಲ್ಲಿ ಪ್ರದೇಶದಲ್ಲಿ ಮತ್ತು ಲಾಸ್ ವೇಗಾಸ್, ಸಿಯಾಟಲ್, ಚಿಕಾಗೊ, ಅರಿಝೋನಾ, ನ್ಯೂಯಾರ್ಕ್ ನಗರ ಮತ್ತು ವರ್ಜಿನಿಯಾಗಳಲ್ಲಿಯೂ ಕಾರ್ಯನಿರ್ವಹಿಸುತ್ತವೆ.
ಯಾಕುಝಾದ ಜನಸಂಖ್ಯೆ ಕಡಿಮೆಯಾಗುತ್ತಿದೆಯೇ ?
ಯಾಕುಝಾ ಜಪಾನಿನ ಮಾಧ್ಯಮದ ಮೇಲೆ ಹೆಚ್ಚಿನ ಹಿಡಿತವನ್ನು ಹೊಂದಿದ್ದರೂ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ, ವಿಶೇಷವಾಗಿ 1960 ರ ದಶಕದಲ್ಲಿ ಬೃಹತ್ ಪ್ರಮಾಣದಲ್ಲಿ ಕೆಲಸ ಮಾಡಿದರೂ, ಮಾರುಕಟ್ಟೆಯ ಅವಕಾಶಗಳು ಬದಲಾದ ನಂತರ ಮತ್ತು ಜಪಾನ್ ಹಲವಾರು ಕಾನೂನು ಮತ್ತು ಸಾಮಾಜಿಕ ಬೆಳವಣಿಗೆಗಳನ್ನು ಜಾರಿಗೆ ತಂದ ನಂತರ ಅವರ ಸಂಖ್ಯೆ ತೀವ್ರವಾಗಿ ಕುಸಿಯಿತು.
2023 ರ ಹೊತ್ತಿಗೆ, ಯಾಕುಝಾ ಕೇವಲ 10,400 ಸದಸ್ಯರನ್ನು ಮತ್ತು 10,000 ಅರೆ-ಸದಸ್ಯರನ್ನು ಮಾತ್ರ ಹೊಂದಿತ್ತು ಮತ್ತು ದೇಶದಲ್ಲಿ ಹೆಚ್ಚು ಯುವಕರು ಸಿಂಡಿಕೇಟ್ ಗೆ ಸೇರಲು ನಿರಾಕರಿಸುತ್ತಿದ್ದು, ಸಂಖ್ಯೆ ಕಡಿಮೆಯಾಗುತ್ತಿದೆ.