‘ಯಕ್ಷಗಾನ‘ ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ ವೇಷಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾಧ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದ ಕಲೆ. ಅದರಲ್ಲೂ ಕರಾವಳಿ ಮತ್ತು ಮಲೆನಾಡಿನ ಪ್ರದೇಶಗಳು ಹಾಗೂ ಕೇರಳದ ಕಾಸಗೋಡಿನಂತರ ಪ್ರದೇಶದಲ್ಲಿ ಈ ಕಲೆ ಹೆಚ್ಚು ಪ್ರಸಿದ್ಧ. ಯಕ್ಷಗಾನ ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ನಡೆಯುವ ಆಟಗಳಾಗಿವೆ.
ಅಕ್ಕಪಕ್ಕದ ಊರಿನವರೆಲ್ಲ ಒಂದೆಡೆ ಸೇರಿ ಯಕ್ಷಗಾನ ನೋಡುವುದೇ ಒಂದು ಸಂಭ್ರಮ. ಯಕ್ಷಗಾನ ನಡೆಯುವಾಗ ಸಾಮಾನ್ಯವಾಗಿ ಧ್ವನಿವರ್ಧಕಗಳನ್ನ ಬಳಸಲಾಗುತ್ತೆ. ಆದರೆ ಸರ್ಕಾರ ಹೇರಿರೋ ಧ್ವನಿ ನಿರ್ಬಂಧ ಹೇರಿಕೆಯಿಂದ ಯಕ್ಷಗಾನ ಕಲಾವಿದರಿಗೆ ಆತಂಕ ಶುರುವಾಗಿದೆ.
BIG NEWS: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನಿ ಸರ್ಕಾರ ರಚನೆಯಾಗುತ್ತೆ; ಪಕ್ಷದಲ್ಲಿ ಹಿಂದೂಗಳ ಪರ ಯಾರಿದ್ದಾರೆ…..? ಸಂಸದ ಪ್ರತಾಪ್ ಸಿಂಹ ವಾಗ್ದಾಳಿ
ಧ್ವನಿವರ್ಧಕ ಬಳಕೆ ಕುರಿತಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6ಗಂಟೆಯವರೆಗೆ ಧ್ವನಿವರ್ಧಕ ಬಳಸುವಂತಿಲ್ಲ. ಒಳಾಂಗಣದ ಕಾರ್ಯಕ್ರಮಗಳಿಗೂ ಅನುಮತಿ ಪಡೆದುಕೊಂಡೇ ನಿಗದಿತ ಡೆಸಿಬಲ್ ಸಾಮರ್ಥ್ಯದ ಧ್ವನಿವರ್ಧಕ ಬಳಸಬೇಕು. ಸರ್ಕಾರದ ಈ ಸುತ್ತೋಲೆಯಿಂದಾಗಿ ಯಕ್ಷಗಾನ ಕಲೆ ಸಮಸ್ಯೆಯನ್ನ ಎದುರಿಸೋ ಹಾಗಾಗಿದೆ. ಧ್ವನಿವರ್ಧಕ ಇಲ್ಲದೇ ಯಕ್ಷಗಾನ ಮಾಡುವುದು ತುಂಬಾನೇ ಕಷ್ಟ. ಯಕ್ಷಗಾನ ಅಷ್ಟೆ ಅಲ್ಲ ನಾಟಕ, ನೇಮ, ಕೋಲದಂತಹ ಅಪರೂಪದ ಕಲೆಗಳು ಸಹ ತೊಂದರೆ ಅನುಭವಿಸೋವಂತಾಗಿದೆ.
ಕರಾವಳಿ ಹಾಗೂ ಮಲೆನಾಡಿನಲ್ಲಿ 6 ತಿಂಗಳು ನಿರಂತರವಾಗಿ ಯಕ್ಷಗಾನ ಪ್ರದರ್ಶನ ನಡೆಯುತ್ತವೆ. ಸಂಜೆ 6 ಗಂಟೆಯಿಂದ ಬೆಳಿಗ್ಗೆ 6ಗಂಟೆಯವರೆಗೆ ಪ್ರದರ್ಶನ ಮಾಡಲಾಗುತ್ತೆ. ಈ ಅವಧಿಯಲ್ಲಿ ಧ್ವನಿವರ್ಧಕಗಳ ಬಳಕೆಗೆ ನಿರ್ಬಂಧ ವಿಧಿಸುವುದರಿಂದ ಯಕ್ಷಗಾನ ನಡೆಸುವುದು ದುಸ್ತರವಾಗಲಿದೆ ಅಂತ ಯಕ್ಷಗಾನ ಕಲಾವಿದರು ತಮ್ಮ ಆತಂಕವನ್ನ ತೋಡಿಕೊಳ್ಳುತ್ತಿದ್ದಾರೆ.