ಲಕ್ನೋದ ಸಂಚಾರದಟ್ಟಣೆಯುಳ್ಳ ರಸ್ತೆಯಲ್ಲಿ ಕ್ಯಾಬ್ ಡ್ರೈವರ್ಗೆ ಥಳಿಸಿ ಭಾರೀ ಸುದ್ದಿಯಲ್ಲಿರುವ ಯುವತಿಯ ಮತ್ತೊಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಈಕೆ ನೆರೆಮನೆಯವರು ತಮ್ಮ ಗೋಡೆಗೆ ಕಪ್ಪು ಬಣ್ಣ ಬಳಿದಿದ್ದಾರೆ ಎಂಬ ವಿಚಾರವಾಗಿ ಆಕ್ರೋಶ ಹೊರಹಾಕುತ್ತಿದ್ದಾಳೆ.
ಪ್ರಿಯದರ್ಶಿನಿ ನಾರಾಯಣ ಯಾದವ್ ಈ ವೈರಲ್ ವಿಡಿಯೋದಲ್ಲಿ ಪೊಲೀಸರ ಬಳಿ ಹೋಗಿ ಕಪ್ಪು ಬಣ್ಣ ಬಳಿದಿರುವ ಗೋಡೆಯ ಪೇಂಟಿಂಗ್ನ್ನು ಬದಲಾಯಿಸುವಂತೆ ಹೇಳಿ. ಏಕೆಂದರೆ ಕಪ್ಪು ಬಣ್ಣವು ಅಂತಾರಾಷ್ಟ್ರೀಯ ಡ್ರೋಣ್ನ್ನು ಆಕರ್ಷಿಸುತ್ತದೆ ಎಂದು ಹೇಳಿದ್ದಾರೆ.
ಈ ವಿಡಿಯೋ ಹಳೆಯದಾಗಿದ್ದರೂ ಸಹ ಕ್ಯಾಬ್ ಡ್ರೈವರ್ ಮೇಲೆ ಪ್ರಿಯದರ್ಶಿನಿ ಹಲ್ಲೆ ನಡೆಸಿದ ಬಳಿಕ ಮತ್ತೊಮ್ಮೆ ವೈರಲ್ ಆಗಿದೆ. ಅಲ್ಲದೇ ನೆಟ್ಟಿಗರು ಈಕೆಯನ್ನು ಬಂಧಿಸುವಂತೆ ಕೂಡ ಆಗ್ರಹಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಪ್ರಿಯದರ್ಶಿನಿ ಪೊಲೀಸರ ಬಳಿ, ನೀವು ಇವರಿಗೆ ಗೋಡೆಗೆ ಬೇರೆ ಬಣ್ಣ ಬಳಿಯುವಂತೆ ಹೇಳಿ. ಏಕೆಂದರೆ ಈ ಬಣ್ಣದ ಗೋಡೆಯು ಬೇಗನೇ ಅಂತಾರಾಷ್ಟ್ರೀಯ ಡ್ರೋನ್ಗಳ ಕಣ್ಣುಕುಕ್ಕುತ್ತದೆ. ಇಲ್ಲಿ ಅನೇಕ ಬಾರಿ ಡ್ರೋನ್ಗಳು ಓಡಾಡಿವೆ. ಇದರಿಂದ ನಮ್ಮೆಲ್ಲರ ಜೀವ ಅಪಾಯದಲ್ಲಿದೆ ಎಂದು ಹೇಳಿದ್ದಾಳೆ.
ಈ ನಡುವೆ ಕ್ಯಾಬ್ ಡ್ರೈವರ್ಗೆ ಥಳಿಸಿದ ಪ್ರಕರಣದ ಅಡಿಯಲ್ಲಿ ಈಕೆಯ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಲಕ್ನೋ ಡಿಸಿಪಿ ಚಿರಂಜೀವಿನಾಥ್ ಸಿನ್ಹಾ, ಪುರುಷನಿಗೆ ಮಹಿಳೆಯು ಥಳಿಸುತ್ತಿರುವ ವೈರಲ್ ವಿಡಿಯೋ ಸಂಬಂಧ ನಾವಿಂದು ಆತನಿಂದ ದೂರನ್ನು ಸ್ವೀಕರಿಸಿದ್ದೇವೆ. ದೂರನ್ನು ಆಧರಿಸಿ ಕೃಷ್ಣ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಹೇಳಿದ್ದಾರೆ.
https://twitter.com/FacktChecker/status/1423213016342962176?ref_src=twsrc%5Etfw%7Ctwcamp%5Etweetembed%7Ctwterm%5E1423213016342962176%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fnews%2Findia%2Fviral-video-priyadarshini-narayan-yadav-old-video-of-lucknow-girl-goes-viral-seen-screaming-on-neighbours-over-black-wall-paint-watch-arrest-lucknow-girl-4867778%2F