ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಯದುವೀರ್ ಒಡೆಯರ್ ಒಟ್ಟು ತಮ್ಮ 4,99 ಕೋಟಿ ರೂ ಆಸ್ತಿ ಘೋಷಿಸಿದ್ದಾರೆ.
ತಮ್ಮ ಒಡೆತನದಲ್ಲಿ ಯಾವುದೇ ಮನೆ, ಕೃಷಿ ಭೂಮಿ, ನಿವೇಶನ ಹೊಂದಿಲ್ಲವೆಂದು ಯದುವೀರ್ ಒಡೆಯರ್ ಅಫಿಡವಿಟ್ನಲ್ಲಿ ಮಾಹಿತಿ ನೀಡಿದ್ದಾರೆ. ಕೈಯಲ್ಲಿ 1 ಲಕ್ಷ ರೂಪಾಯಿ ಹಣ ಹೊಂದಿರುವ ಯದುವೀರ್ ಒಡೆಯರ್, ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿ 1.36 ಕೋಟಿ ರೂ. ಹೊಂದಿದ್ದಾರೆ. ಇದರ ಜೊತೆಗೆ 3.25 ಕೋಟಿ ಮೌಲ್ಯದ 4 ಕೆಜಿ ಚಿನ್ನ, 14 ಲಕ್ಷ ರೂಪಾಯಿ ಮೌಲ್ಯದ 20 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ.
ಯದುವೀರ್ ಅವರು ಒಟ್ಟು 4,99,59,303 ರೂ ಮೌಲ್ಯದ ಚರಾಸ್ಥಿಯನ್ನು ಮಾತ್ರ ಹೊಂದಿದ್ದಾರೆ. ಪತ್ನಿ ತ್ರಿಶಿಕಾ ಹೆಸರಿನಲ್ಲಿ 1,04,25,000 ರೂ ಮೌಲ್ಯದ ಚರಾಸ್ತಿ ಘೋಷಿಸಿದ್ದಾರೆ.
ಯದುವೀರ್ ಯಾವುದೇ ಕೃಷಿ ಭೂಮಿ, ವಾಣಿಜ್ಯ ಕಟ್ಟಡ ಹೊಂದಿಲ್ಲ. ಹಾಗೂ ಬ್ಯಾಂಕ್ ಗಳಲ್ಲಿ ಯಾವುದೇ ಸಾಲ ಪಡೆದಿಲ್ಲ. . ತನ್ನ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಯದುವೀರ್ ಅಫಿಡವಿಟ್ ನಲ್ಲಿ ಉಲ್ಲೇಖಿಸಿದ್ದಾರೆ.