ಯಾದಗಿರಿ: ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನಲ್ಲಿ ಅಣ್ಣನೇ ತಂಗಿಯ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ನಡೆದಿದೆ
ಅಕ್ಟೋಬರ್ 4 ರಂದು ಘಟನೆ ನಡೆದಿದ್ದು ಬುಧವಾರ ಪೊಲೀಸರಿಗೆ ದೂರು ನೀಡಲಾಗಿದೆ. ಸುರಪುರ ತಾಲೂಕಿನ ಗ್ರಾಮವೊಂದರ ನಿವಾಸಿಯಾಗಿರುವ ಆರೋಪಿ ಬಸ್ ನಿಲ್ದಾಣದಲ್ಲಿ ಮನೆಗೆ ಹೋಗಲು ನಿಂತಿದ್ದ ದೊಡ್ಡಪ್ಪನ ಮಗಳನ್ನು ಗ್ರಾಮಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಇಂತಹ ಕೃತ್ಯವೆಸಗಿದ್ದಾನೆ.
ಮಾರ್ಗಮಧ್ಯೆ ಹಣ್ಣು ತರಲು ಹೋಗೋಣ ಎಂದು ಹೇಳಿ ಕರೆದೊಯ್ದು ತಂಗಿ ಮೇಲೆ ಅತ್ಯಾಚಾರ ಎಸಗಿ ಜೀವಬೆದರಿಕೆ ಹಾಕಿದ್ದಾನೆ. ಸಂತ್ರಸ್ಥೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಹುಷಾರಿಲ್ಲದ ಕಾರಣ ಯುವತಿ ಶಹಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗ್ರಾಮಕ್ಕೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಊರಿಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿದ್ದ ಆರೋಪಿ ಇಂತಹ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.