ಯಾದಗಿರಿ: ವಿಜಯಪುರದ ಬಳಿಕ ಯಾದಗಿರಿ ಜಿಲ್ಲೆಯಲ್ಲಿಯೂ ವಕ್ಫ್ ಬೋರ್ಡ್ ರೈತರ ಕೃಷಿ ಜಮೀನು ವಶಕ್ಕೆ ಪಡೆದಿದೆ ಎಂಬ ಆರೋಪ ಕೇಳಿಬಂದಿದೆ.
ರೈತರ ಭೂಮಿ ಪಹಣಿ ಕಾಲಂ ನಂಬರ್ 11ರ ಮೇಲೆ ವಕ್ಫ್ ಎಂದು ನಮೂದಿಸಲಾಗಿದ್ದು, ಸಾವಿರಾರು ಎಕರೆ ಕೃಷಿ ಭೂಮಿ ವಕ್ಫ್ ಹೆಸರಿಗೆ ವರ್ಗಾವಣೆಯಾಗಿದೆ. ಇದರಿಂದ ರೈತರು ಬೀದಿಗೆ ಬಂದಿದ್ದು, ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ 1440 ರೈತರ ಕೃಷಿ ಭೂಮಿ ವಕ್ಫ್ ಬೋರ್ಡ್ ಗೆ ವರ್ಗಾಯಿಸಲಾಗಿದೆ. ಈ ಭೂಮಿಯನ್ನು ರೈತರು ವಂಶಪಾರಂಪರಿಕವಾಗಿ ಉಳುಮೆ ಮಾಡುತ್ತಾ ಬಂದಿದ್ದರು. ಆದರೆ ಈಗ ವಕ್ಫ್ ಬೋರ್ಡ್ ಗೆ ವರ್ಗಾವಣೆಯಾಗಿದೆ.
ಕೆಲ ದಿನಗಳ ಹಿಂದೆ ಕೊಂಗೋಡಿ ಗ್ರಮದ ಕೆಲ ಜಮೀನನ್ನು ರೈಲ್ವೆ ಇಲಾಖೆ ಹಳಿ ಕಾಮಗಾರಿಗಾಗಿ ವಶಪಡಿಸಿಕೊಂಡಿತ್ತು. ಈ ವೇಳೆ ಇಲಾಖೆಗೆ ಪರಿಹಾರ ಕೇಳಲು ರೈತರು ದಾಖಲೆ ಹಾಗೂ ಪಹಣಿ ಸಲ್ಲಿಸಿದ್ದರು. ಆಗ ರೈತರ ಪಹಣಿಯಲ್ಲಿನ 11 ನಂಬರ್ ಕಾಲಂ ನಲ್ಲಿ ವಕ್ಫ್ ಎಂದು ನಮೂದಾಗಿರುವುದು ಬೆಳಕಿಗೆ ಬಂದಿದೆ. ರೈತರ ಜಮೀನು ಬಳಿ ಯಾವುದೇ ದರ್ಗಾ, ಮಸೀದಿ ಇಲ್ಲದಿದ್ದರೂ ವಕ್ಫ್ ಬೋರ್ಡ್ ಗೆ ವರ್ಗಾವಣೆಯಾಗಿದ್ದು ಹೇಗೆ? ಎಂದು ರೈತರು ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.