
ಯಾದಗಿರಿ: ಕೆರೆಯಲ್ಲಿ ಈಜಲು ತೆರಳಿದ್ದಾಗ ದುರಂತವೊಂದು ಸಂಭವಿಸಿದೆ. ಈಜಲು ಹೋಗಿದ್ದ ಮೂವರು ಬಾಲಕರು ನೀರು ಪಾಲಾಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಸುರಪುರ ತಾಲೂಕಿನ ನುಗನೂರು ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಹೈಯಾಳಪ್ಪ (11), ಶರಣಬಸವ (10 ಹಾಗೂ ಅನಿಲ (10) ಮೃತ ಬಾಲಕರು. ಈಜಲೆಂದು ಕೆರೆಗೆ ಇಳಿದಿದ್ದಾಗ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಕೆರೆಯಿಂದ ಮೂವರು ಬಾಲಕರ ಮೃತದೇಹ ಹೊರತೆಗೆಯಲಾಗಿದೆ. ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.