ಯಾದಗಿರಿ: ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದಲ್ಲಿ ಕಾಮುಕನೊಬ್ಬ ಭಿಕ್ಷುಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಭಿಕ್ಷುಕಿಗೆ ಮದ್ಯ ಕುಡಿಸಿದ ಆರೋಪಿ ತಾನೂ ಕೂಡ ಮದ್ಯ ಸೇವನೆ ಮಾಡಿ ಅತ್ಯಾಚಾರ ಎಸಗಿದ್ದಾನೆ. ನವೆಂಬರ್ 23ರ ರಾತ್ರಿ ಘಟನೆ ನಡೆದಿದೆ.
ಭಿಕ್ಷುಕಿಗೆ ಮದ್ಯ ಕುಡಿಸಿದ ಆರೋಪಿ ಆಕೆಯ ಮೇಲೆ ಹಲ್ಲೆ ಮಾಡಿ ಅತ್ಯಾಚಾರವೆಸಗಿದ್ದಾನೆ. ಸ್ಥಳೀಯರು ಪ್ರಶ್ನಿಸಿದಾಗ ನನ್ನ ಪತ್ನಿ ಎಂದು ನಾಟಕವಾಡಿದ್ದಾನೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಕಾಮುಕನನ್ನು ಅವರಿಗೆ ಒಪ್ಪಿಸಲಾಗಿದೆ. ಯಾದಗಿರಿ ಮಹಿಳಾ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.