ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಕಟ್ಟುನಿಟ್ಟಾದ ಕೋವಿಡ್ ಕ್ರಮಗಳ ವಿರುದ್ಧ ಸಾರ್ವಜನಿಕ ಕೋಪವು ಶಾಂಘೈನಲ್ಲಿ ಏರುತ್ತಲೇ ಇದ್ದು, ಪ್ರತಿಭಟನಾಕಾರರು ಚೀನಾದ ನಾಯಕನನ್ನು ಕೆಳಗಿಳಿಯುವಂತೆ ಕರೆ ನೀಡಿದ್ದಾರೆ.
ಉರುಂಕಿ ಬೆಂಕಿಯ ಸಂತ್ರಸ್ತರಿಗಾಗಿ ನಡೆದ ಕ್ಯಾಂಡಲ್‌ಲೈಟ್ ಸಭೆಯಲ್ಲಿ ಪ್ರತಿಭಟನಾಕಾರರು ಕ್ಸಿ ಜಿನ್ ಪಿಂಗ್ ಗೆ ‘ಕೆಳಗಿಳಿಯುವಂತೆ’ ಕರೆ ನೀಡಿದ್ದಾರೆ.
ಸ್ಥಳೀಯ ಅಗ್ನಿಶಾಮಕ ಇಲಾಖೆ ಪ್ರಕಾರ, ಗುರುವಾರ ಬೆಂಕಿ ಕಾಣಿಸಿಕೊಂಡಾಗ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊಗಳು ಪ್ರತಿಭಟನಾಕಾರರು ‘ಕಮ್ಯುನಿಸ್ಟ್ ಪಕ್ಷವನ್ನು ಕೆಳಗಿಳಿಸಿ!, ‘ಕ್ಸಿ ಜಿನ್‌ಪಿಂಗ್ ಕೆಳಗಿಳಿಸಿ’ ಮತ್ತು ‘ಕ್ಸಿನ್ ಜಿಯಾಂಗ್ ನಲ್ಲಿ ಲಾಕ್ ಡೌನ್ ಅಂತ್ಯಗೊಳಿಸಿ’ ಎಂದು ಘೋಷಣೆಗಳನ್ನು ಕೂಗುತ್ತಿರುವುದನ್ನು ತೋರಿಸುತ್ತಿವೆ. ಪೊಲೀಸರು ಪ್ರತಿಭಟನಾ ಸ್ಥಳದಲ್ಲಿ ಹಲವರನ್ನು ಬಂಧಿಸಿ ಪೊಲೀಸ್ ವಾಹನಗಳಲ್ಲಿ ಕೂಡಿ ಹಾಕುತ್ತಿರುವುದು ಕೂಡ ಕಂಡುಬಂದಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊಗಳು ಉರುಮ್ಕಿಯ ಬೀದಿಗಳಲ್ಲಿ ಜನರು ಕೋವಿಡ್ ವಿರೋಧಿ ನೀತಿಯ ವಿರುದ್ಧ ಪ್ರತಿಭಟಿಸುತ್ತಿರುವುದನ್ನು ತೋರಿಸಿದೆ.
ಕಟ್ಟುನಿಟ್ಟಾದ ಕೋವಿಡ್ -19 ಕ್ರಮಗಳು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟುಮಾಡಿದೆ. ಕಟ್ಟಡ ಭಾಗಶಃ ಲಾಕ್ ಡೌನ್ ಆಗಿರುವುದರಿಂದ ನಿವಾಸಿಗಳು ಸಮಯಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ.