alex Certify BIG NEWS: ಆತಂಕ ಮೂಡಿಸುತ್ತಿದೆ ಒಮಿಕ್ರಾನ್‌ ನ ರೂಪಾಂತರ ತಳಿ XBB; ಕೇರಳಲ್ಲಿಯೂ ಪತ್ತೆ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆತಂಕ ಮೂಡಿಸುತ್ತಿದೆ ಒಮಿಕ್ರಾನ್‌ ನ ರೂಪಾಂತರ ತಳಿ XBB; ಕೇರಳಲ್ಲಿಯೂ ಪತ್ತೆ ?

ನವದೆಹಲಿ: ಕೆಲವು ದೇಶಗಳಲ್ಲಿ ಕೋವಿಡ್-19 ವೈರಸ್‌ನ ರೂಪಾಂತರವಾದ ಒಮಿಕ್ರಾನ್‌ನ ರೂಪಾಂತರ ತಳಿ ಎಕ್ಸ್‌ಬಿಬಿ ಪತ್ತೆಯಾಗಿದ್ದು, ಅದು ಭಾರತಕ್ಕೂ ಕಾಲಿಟ್ಟಿರುವ ಶಂಕೆ ವ್ಯಕ್ತವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಉನ್ನತ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಅವರು ರೂಪಾಂತರಿ ವೈರಲ್​ ಕುರಿತು ಮಾಹಿತಿ ನೀಡಿದ್ದಾರೆ.

ಅಭಿವೃದ್ಧಿಶೀಲ ರಾಷ್ಟ್ರಗಳ ಲಸಿಕೆ ತಯಾರಕರ ನೆಟ್‌ವರ್ಕ್ (ಡಿಸಿವಿಎಂಎನ್) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.

ಈ ಹೊಸ ರೂಪಾಂತರಗಳು ಪ್ರಾಯೋಗಿಕವಾಗಿ ಹೆಚ್ಚು ತೀವ್ರವಾಗಿವೆ ಎಂದು ಸೂಚಿಸಲು ಯಾವುದೇ ದೇಶದಿಂದ ಯಾವುದೇ ಅಂಕಿಅಂಶ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

“ಒಮಿಕ್ರಾನ್‌ನ 300 ಕ್ಕೂ ಹೆಚ್ಚು ಉಪವಿಭಾಗಗಳಿವೆ. ಇದೀಗ ಸಂಬಂಧಿಸಿರುವುದು ಎಕ್ಸ್​ಬಿಬಿ ಎಂದಿದ್ದಾರೆ. ಇದರ ನಡುವೆಯೇ, ರಾಜ್ಯದಲ್ಲಿ ಹೊಸ ರೂಪಾಂತರಿ ಎಕ್ಸ್​ಬಿಬಿ ಕೇರಳದಲ್ಲೂ ಈಗಾಗಲೇ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ನ ಇತರ ಉಪತಳಿಗಳಾದ ಬಿಎ.2.3.20 ಹಾಗೂ ಬಿಕ್ಯು.1 ರೂಪಾಂತರಿಗಳೂ ಪತ್ತೆಯಾಗಿದ್ದು ದೇಶದಲ್ಲಿ ಇದೇ ಮೊದಲ ಬಾರಿಗೆ ಈ ಉಪತಳಿಗಳ ಪ್ರಕರಣಗಳು ಪತ್ತೆಯಾಗಿವೆ. ಎಕ್ಸ್​ಬಿಬಿ ಓಮಿಕ್ರಾನ್ ನ ಎರಡು ಉಪತಳಿಗಳಾದ ಬಿಜೆ-1 ಹಾಗೂ ಬಿಎ.2.75 ನ ಮರುಸಂಯೋಜಿತ ವಂಶಾವಳಿಯಾಗಿದ್ದು ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ ಎಂದು ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...