ಡಬ್ಲ್ಯೂಡಬ್ಲ್ಯೂಐ ಐ ನಲ್ಲಿದ್ದ ಹಿರಿಯ ಫ್ರಾಂಕ್ ಗ್ರಾಸ್ ಬರ್ಗರ್ ಅವರಿಗೆ 12 ವರ್ಷದ ಹಿಂದೆ ಒಂಭತ್ತು ವರ್ಷದ ಬಾಲಕಿ ಪತ್ರ ಬರೆದು ಕಳುಹಿಸಿದ್ದರು. ಇದೀಗ ಆ ಯುವತಿಯನ್ನು ಭೇಟಿಯಾದ ವಿಡಿಯೋ ಹಂಚಿಕೊಳ್ಳಲಾಗಿದ್ದು, ಜನರನ್ನು ಭಾವುಕರನ್ನಾಗಿಸಿದೆ.
ಈ ಭಾವುಕ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಸೇನಾಧಿಕಾರಿ ಟ್ರಾವಿಸ್ ಅಕರ್ಸ್ ಹಂಚಿಕೊಂಡಿದ್ದಾರೆ. “12 ವರ್ಷಗಳ ಹಿಂದೆ, ಡಬ್ಲ್ಯೂಡಬ್ಲ್ಯೂಐ ಐನ ಅನುಭವಿ ಫ್ರಾಂಕ್ ಗ್ರಾಸ್ ಬರ್ಗರ್ ತನ್ನ ಮಿಲಿಟರಿ ಸೇವೆಗೆ ಧನ್ಯವಾದ ಸಲ್ಲಿಸುವ ವೇಳೆ 9 ವರ್ಷದ ಬಾಲಕಿಯಿಂದ ಪತ್ರ ಪಡೆದಿದ್ದರು. ಫ್ರಾಂಕ್ ನ ನೆರೆಮನೆಯ ವ್ಯಕ್ತಿಯು ಯುವತಿಯನ್ನು ಕಂಡುಕೊಂಡರು. ನಂತರ ಇಷ್ಟು ವರ್ಷಗಳ ಬಳಿಕ ಅವರು ಭೇಟಿಯಾದರು” ಎಂದು ಟ್ರಾವಿಸ್ ಟ್ವೀಟ್ ಮಾಡಿದ್ದಾರೆ.
ಪರಿಸರವಾದಿ ಡಿ.ವಿ. ಗಿರೀಶ್ ಮೇಲೆ ಹಲ್ಲೆ ಮಾಡಿದ್ದ 7 ಮಂದಿ ಅರೆಸ್ಟ್
ಫ್ರಾಂಕ್ ಗ್ರಾಸ್ ಬರ್ಗರ್ ಅವರು ಪತ್ನಿ ಜೊತೆ ಕುಳಿತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕೆಲವೇ ಕ್ಷಣಗಳಲ್ಲಿ ಯುಎಸ್ ಮಿಲಿಟರಿ ಸಮವಸ್ತ್ರ ಧರಿಸಿದ ಯುವತಿಯೊಬ್ಬಳು ನಡೆದು ಬಂದು ಇವರನ್ನು ಸ್ವಾಗತಿಸಿದರು. ಈ ವೇಳೆ ಆನಂದಭಾಷ್ಪವೇ ಹರಿಯಿತು. ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಭಾವುಕರಾಗಿದ್ದಾರೆ.
https://twitter.com/travisakers/status/1432238075070066689?ref_src=twsrc%5Etfw%7Ctwcamp%5Etweetembed%7Ctwterm%5E1432238075070066689%7Ctwgr%5E%7Ctwcon%5Es1_&ref_url=https%3A%2F%2Fwww.hindustantimes.com%2Ftrending%2Fwwii-veteran-meets-woman-who-sent-him-a-letter-when-she-was-nine-year-old-watch-101630489951688.html