ಕನ್ನಡದ ಪ್ರಸಿದ್ಧ ಪತ್ರಕರ್ತ ಮತ್ತು ಪತ್ರಿಕೋದ್ಯಮಿಯಾಗಿದ್ದ ‘ಹಾಯ್ ಬೆಂಗಳೂರು’ ವಾರಪತ್ರಿಕೆ ಸಂಪಾದಕ ರವಿ ಬೆಳಗೆರೆ ‘ಓ ಮನಸೇ’ ಪಾಕ್ಷಿಕ ಪತ್ರಿಕೆಯ ಸಂಪಾದಕರೂ ಆಗಿದ್ದರು.
ಕನ್ನಡ ಸಾಹಿತಿ, ಚಿತ್ರಕಥೆ, ಬರಹಗಾರ, ನಿರೂಪಕರಾಗಿ ಜನಶ್ರೀ ವಾಹಿನಿ ಮುಖ್ಯಸ್ಥರಾಗಿ ಅವರು ಕಾರ್ಯನಿರ್ವಹಿಸಿದ್ದಾರೆ. ಹಲವಾರು ಪುಸ್ತಕಗಳನ್ನು ಬರೆದ ಮತ್ತು ಭಾಷಾಂತರಿಸಿದ ರವಿ ಬೆಳಗೆರೆ ಭಾವನಾ ಪ್ರಕಾಶನ ಪ್ರಾರ್ಥನಾ ಶಾಲೆಯ ಮುಖ್ಯಸ್ಥರಾಗಿದ್ದರು.
ಹಾಯ್ ಬೆಂಗಳೂರು ಸಂಪಾದಕರಾಗುವ ಮೊದಲು ಕರ್ಮವೀರ, ಸಂಯುಕ್ತ ಕರ್ನಾಟಕ, ಕಸ್ತೂರಿ, ಲಂಕೇಶ್ ಪತ್ರಿಕೆಗಳಿಗೆ ಬರೆಯುತ್ತಿದ್ದರು. 15 ಮಾರ್ಚ್ 1958 ರಲ್ಲಿ ಬಳ್ಳಾರಿಯಲ್ಲಿ ಜನಿಸಿದ ರವಿಬೆಳಗೆರೆ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಅವರ ಪ್ರಮುಖ ಕೃತಿಗಳು ಹಿಮಾಲಯನ್ ಬ್ಲಂಡರ್, ಭೀಮಾ ತೀರದ ಹಂತಕರು, ನೀ ಹಿಂಗ ನೋಡಬೇಡ ನನ್ನ, ಡಿ ಕಂಪನಿ, ಇಂದಿರೆಯ ಮಗ ಸಂಜಯ, ಕಲ್ಪನಾವಿಲಾಸ, ಗೋಲಿಬಾರ್, ಕಾದಂಬರಿ, ಮಾಟಗಾತಿ, ಸರ್ವ ಸಂಬಂಧ, ಗಾಡ್ ಫಾದರ್, ಕಾಮರಾಜ ಮಾರ್ಗ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವುಗಳೊಂದಿಗೆ ಕಾರ್ಗಿಲ್ ನಲ್ಲಿ ಹದಿನೇಳು ದಿನ, ಪಾಪಿಗಳ ಲೋಕದಲ್ಲಿ ರವಿಬೆಳಗೆರೆಯ ಲೇಖನಿಯಿಂದ ಮೂಡಿಬಂದಿವೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿಯನ್ನು ಗಳಿಸಿದ್ದಾರೆ. ಅವರು ನಾಲ್ವರು ಮಕ್ಕಳ ತುಂಬು ಕುಟುಂಬವನ್ನು ಅಗಲಿದ್ದಾರೆ. ತಮ್ಮ ಬರಹಗಳ ಮೂಲಕವೇ ಪ್ರಭಾವಿಸಿದ ಲೇಖಕರಾಗಿದ್ದರು.