ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ಕಮಾಲ್ ಮಾಡಿದೆ. ನಿರೀಕ್ಷೆಯಂತೆ ಬಜರಂಗ್ ಪುನಿಯಾ ಕಂಚು ಗೆದ್ದಿದ್ದಾರೆ. ಕಂಚಿಗಾಗಿ ಬಜರಂಗ್ ಪುನಿಯಾ ಹಾಗೂ ಕಜಕಿಸ್ತಾನದ ಡಿ. ನಿಯಾಜ್ಬೆಕೋವ್ ಮುಖಾಮುಖಿಯಾಗಿದ್ದರು.
65 ಕೆ.ಜಿ ಕುಸ್ತಿ ವಿಭಾಗದಲ್ಲಿ ಬಜರಂಗ್ ಕಂಚು ಗೆದ್ದಿದ್ದಾರೆ. 8-0 ಅಂಕಗಳಿಂದ ಬಜರಂಗ್ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಕಜಕಿಸ್ತಾನ ಆಟಗಾರ ಸಾಕಷ್ಟು ಪ್ರಯತ್ನಿಸಿದರೂ ಪೂನಿಯಾ ಅವರಿಗೆ ಒಂದೇ ಒಂದು ಅವಕಾಶವನ್ನು ನೀಡಲಿಲ್ಲ. ಮೊದಲ ಅವಧಿಯಲ್ಲಿ ಭಜರಂಗ್ 2-0 ಮುನ್ನಡೆಯಲ್ಲಿದ್ದರು. ಎರಡನೇ ಅವಧಿಯಲ್ಲಿ, ಪೂನಿಯಾ ಇನ್ನೂ 4 ಅಂಕಗಳನ್ನು ಅದ್ಭುತ ರೀತಿಯಲ್ಲಿ ಪಡೆದರು. ಕೊನೆಯಲ್ಲಿ 8-0 ಅಂಕದಿಂದ ಗೆಲುವು ಸಾಧಿಸಿದ್ರು.