
ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹಿಳಾ ಪ್ರೀಮಿಯರ್ ಲೀಗ್(ಡಬ್ಲ್ಯೂ.ಪಿ.ಎಲ್.) ಕ್ರಿಕೆಟ್ ಪಂದ್ಯ ನಡೆಯುವ ದಿನಗಳಂದು ನಮ್ಮ ಮೆಟ್ರೋ ಸಂಚಾರ ಅವಧಿಯನ್ನು ರಾತ್ರಿ 25 ನಿಮಿಷ ವಿಸ್ತರಿಸಲು ಬಿಎಂಆರ್ಸಿಎಲ್ ನಿರ್ಧರಿಸಿದೆ.
ಫೆಬ್ರವರಿ 21, 22, 24, 25, 26, 27, 28, ಮಾರ್ಚ್ 1 ರಂದು ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳು ನಡೆಯಲಿವೆ. ಈ ದಿನಗಳಂದು ರಾತ್ರಿ 11:20ಕ್ಕೆ ಮೆಟ್ರೋ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗಗಳ ನಾಲ್ಕು ಟರ್ಮಿನಲ್ ಗಳಿಂದ ಕೊನೆಯ ಮೆಟ್ರೋ ರೈಲುಗಳು ಹೊರಡುತ್ತವೆ. ಮೆಜೆಸ್ಟಿಕ್ ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ನಾಲ್ಕು ಟರ್ಮಿನಲ್ ಗಳ ಕಡೆಗೆ ರಾತ್ರಿ 11:55 ಕ್ಕೆ ರೈಲುಗಳು ಹೊರಡಲಿವೆ.
ಸಾಮಾನ್ಯ ದಿನಗಳಲ್ಲಿ ಕೊನೆಯ ರೈಲುಗಳು ನಾಲ್ಕು ಟರ್ಮಿನಲ್ ಗಳಿಂದ ರಾತ್ರಿ 11 ಗಂಟೆಗೆ, ಮೆಜೆಸ್ಟಿಕ್ ನಿಂದ ಟರ್ಮಿನಲ್ ಗಳ ಕಡೆಗೆ ರಾತ್ರಿ 11:30ಕ್ಕೆ ಹೊರಡುತ್ತಿದ್ದವು.
ಪ್ರಯಾಣಿಕರು ಸ್ಮಾರ್ಟ್ ಕಾರ್ಡ್, ಕ್ಯೂಆರ್ ಟಿಕೆಟ್, ಎನ್.ಸಿ.ಎಂ.ಸಿ. ಟೋಕನ್ ಬಳಸಿ ಪ್ರಯಾಣಿಸಬಹುದಾಗಿದೆ ಎಂದು ಹೇಳಲಾಗಿದೆ.