
ಪುರುಷರ ಐಪಿಎಲ್ ಟಿ20 ಮಾದರಿಯಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ ಕೂಡ ಆರಂಭವಾಗಲಿದ್ದು, ಇದಕ್ಕಾಗಿ ಹರಾಜು ಪ್ರಕ್ರಿಯೆ ಫೆಬ್ರವರಿ 13ರಂದು ಮುಂಬೈನಲ್ಲಿ ನಡೆಯಲಿದೆ.
ಈಗಾಗಲೇ ಸಾವಿರ ಮಹಿಳಾ ಕ್ರಿಕೆಟಿಗರು ಇದಕ್ಕಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಹರಾಜಿನಲ್ಲಿ ಐದು ತಂಡಗಳ ಮಾಲೀಕರು ಪಾಲ್ಗೊಳ್ಳಲಿದ್ದು, ಪ್ರತಿ ತಂಡಕ್ಕೂ ಆಟಗಾರ್ತಿಯರ ಖರೀದಿಗಾಗಿ 12 ಕೋಟಿ ರೂಪಾಯಿಗಳ ಬಜೆಟ್ ಮಿತಿಯನ್ನು ನಿಗದಿಪಡಿಸಲಾಗಿದೆ.
ಆಟಗಾರ್ತಿಯರಿಗೆ 50, 40, 20 ಹಾಗೂ 10 ಲಕ್ಷ ರೂಪಾಯಿಗಳ ಮೂಲ ಬೆಲೆಯನ್ನು ನಿಗದಿಪಡಿಸಲಾಗಿದ್ದು, ಭಾರತ ಮಹಿಳಾ ತಂಡದ ಹಾಗೂ ವಿದೇಶಿ ಮಹಿಳಾ ಕ್ರಿಕೆಟಿಗರಿಗೆ ಅತಿ ಹೆಚ್ಚಿನ ಬೆಲೆ ಲಭ್ಯವಾಗಬಹುದು ಎಂದು ಹೇಳಲಾಗುತ್ತಿದೆ.