ಸೂರ್ಯ ದೇವನ ಪೂಜೆ ಹಾಗೂ ಅದರಿಂದಾಗುವ ಅನುಕೂಲಗಳ ಬಗ್ಗೆ ಪುರಾಣಗಳಲ್ಲಿ ವಿವರಿಸಲಾಗಿದೆ. ಪ್ರತಿದಿನ ಸೂರ್ಯ ದೇವನಿಗೆ ಜಲ ಅರ್ಪಣೆ ಮಾಡುವುದರಿಂದ ಆರೋಗ್ಯದಲ್ಲಿ ವೃದ್ಧಿಯಾಗುವ ಜೊತೆಗೆ ಮನೆಯಲ್ಲಿ ಸದಾ ಸಮೃದ್ಧಿ ನೆಲೆಸಿರುತ್ತದೆ.
ಮಹಾಭಾರತದ ಕಥೆ ಪ್ರಕಾರ ಕರ್ಣ, ಸೂರ್ಯನಿಗೆ ನಿಯಮಿತ ರೂಪದಲ್ಲಿ ಜಲ ಅರ್ಪಣೆ ಮಾಡ್ತಾ ಇದ್ದ. ರಾಮಾಯಣದಲ್ಲಿ ಕೂಡ ಇದ್ರ ಉಲ್ಲೇಖವಿದೆ. ರಾಮ ಪ್ರತಿದಿನ ಸೂರ್ಯನಿಗೆ ಜಲವನ್ನು ಅರ್ಪಣೆ ಮಾಡಿ ಪೂಜೆ ಮಾಡುತ್ತಿದ್ದ ಎನ್ನಲಾಗಿದೆ. ಪ್ರತಿದಿನ ಸೂರ್ಯನಿಗೆ ಜಲ ಅರ್ಪಣೆ ಮಾಡಬೇಕೆಂದು ಶಾಸ್ತ್ರಗಳಲ್ಲಿಯೂ ಹೇಳಲಾಗಿದೆ. ಅನೇಕರು ಈ ನಿಯಮವನ್ನು ಪಾಲಿಸುತ್ತ ಬಂದಿದ್ದಾರೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿದಿನ ಸೂರ್ಯನ ಪೂಜೆ ಮಾಡುವುದರಿಂದ ಆತ್ಮ ಶುದ್ಧವಾಗಿ ಆತ್ಮಬಲ ಸಿಗುತ್ತದೆ.
ದೇಹದಲ್ಲಿ ಶಕ್ತಿ ಹೆಚ್ಚಾಗಿ ಕಾರ್ಯಕ್ಷೇತ್ರದಲ್ಲಿ ಯಶಸ್ಸು ಬಯಸುವವರು ಕೂಡ ಪ್ರತಿದಿನ ಸೂರ್ಯನಿಗೆ ಜಲವನ್ನು ಅರ್ಪಿಸಬೇಕು.
ಪರೀಕ್ಷೆಯಲ್ಲಿ ತೊಂದರೆಯಾಗ್ತಾ ಇದ್ದರೆ ಸೂರ್ಯನಿಗೆ ಜಲ ಅರ್ಪಣೆ ಮಾಡುವುದರಿಂದ ಒಳ್ಳೆಯ ದಿನ ನಿಮ್ಮದಾಗುತ್ತದೆ. ಕಷ್ಟಗಳು ದೂರವಾಗುತ್ತವೆ.
ಸೂರ್ಯನಿಗೆ ಜಲ ಅರ್ಪಣೆ ಮಾಡಲು ತಾಮ್ರದ ಕೊಡ ಉತ್ತಮ.