ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ 2020ರಲ್ಲಿ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಸರಿಸುಮಾರು 40 ಪ್ರತಿಶತದಷ್ಟು ಏರಿಕೆ ಕಂಡಿದೆ ಎಂದು ವರದಿಯಾಗಿದೆ. ಎನ್.ಸಿ.ಆರ್.ಬಿ. ನೀಡಿರುವ ಮಾಹಿತಿಯ ಪ್ರಕಾರ ಕಳೆದ ವರ್ಷ ಬಾಲ್ಯವಿವಾಹ ನಿಷೇಧ ಕಾಯ್ದೆಯ ಅಡಿಯಲ್ಲಿ ಒಟ್ಟು 785 ಪ್ರಕರಣಗಳು ದಾಖಲಾಗಿದೆ ಎಂದು ವರದಿಯಾಗಿದೆ.
ಕಳೆದ ವರ್ಷ ದಾಖಲಾದ ಕೇಸುಗಳಲ್ಲಿ ಕರ್ನಾಟಕ ಮೊದಲ ಸ್ಥಾನವನ್ನು ಪಡೆದಿದ್ದು ಒಟ್ಟು 184 ಪ್ರಕರಣಗಳು ವರದಿಯಾಗಿದೆ. ಎರಡನೇ ಸ್ಥಾನದಲ್ಲಿ ಆಸ್ಸಾಂ ಇದ್ದು ಅಲ್ಲಿ 138 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ 98, ತಮಿಳುನಾಡಿನಲ್ಲಿ 77 ಹಾಗೂ ತೆಲಂಗಾಣದಲ್ಲಿ ಒಟ್ಟು 62 ಪ್ರಕರಣಗಳು ವರದಿಯಾಗಿದೆ.
ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಅಡಿಯಲ್ಲಿ 2019ರಲ್ಲಿ 523 ಕೇಸುಗಳು ಹಾಗೂ 2018ರಲ್ಲಿ 501 ಕೇಸುಗಳು ವರದಿಯಾಗಿದ್ದವು. ಇನ್ನುಳಿದಂತೆ 2017ರಲ್ಲಿ 295, 2016ರಲ್ಲಿ 326 ಹಾಗೂ 2015ರಲ್ಲಿ 293 ಪ್ರಕರಣಗಳು ದಾಖಲಾಗಿದ್ದವು.
ಭಾರತದಲ್ಲಿ 18 ವರ್ಷಕ್ಕಿಂತ ಕೆಳಗಿನ ಮಹಿಳೆ, 21 ವರ್ಷದ ಒಳಗಿನ ಪುರುಷರ ವಿವಾಹವನ್ನು ಬಾಲ್ಯ ವಿವಾಹವೆಂದು ಪರಿಗಣಿಸಲಾಗುತ್ತದೆ.