ವಿಶ್ವದ ಅತಿ ಎತ್ತರದ ಮಹಿಳೆ ಎನಿಸಿರುವ ರುಮೇಸಾ ಗೆಲ್ಗಿ ಇದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದು, ಈಕೆಗಾಗಿ ಎಕಾನಮಿ ಕ್ಲಾಸ್ ವಿಮಾನದಲ್ಲಿ 6 ಸೀಟ್‌ಗಳನ್ನು ತೆಗೆದುಹಾಕಬೇಕಾಯಿತು ! ಟರ್ಕಿಶ್ ಏರ್ಲೈನ್ಸ್ನಲ್ಲಿ ಇವರು ಪ್ರಯಾಣಿಸಿದ್ದರು. ಅಲ್ಲಿಯ 6 ಸೀಟ್‌ಗಳನ್ನು ತೆಗೆದುಹಾಕಲಾಯಿತು.
ಟರ್ಕಿಯ ಇಸ್ತಾನ್‌ಬುಲ್‌ನಿಂದ ಯುನೈಟೆಡ್ ಸ್ಟೇಟ್ಸ್‌ನ ಸ್ಯಾನ್ ಫ್ರಾನ್ಸಿಸ್ಕೋಗೆ ಅವರು ವಿಮಾನದಲ್ಲಿ 13 ಗಂಟೆಗಳ ಕಾಲ ಪ್ರಯಾಣಿಸಿದರು.
25 ವರ್ಷದ ಇವರ ಎತ್ತರ 7 ಅಡಿ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಇವರ ಹೆಸರು ಸೇರಿದೆ. ವೀವರ್ಸ್ ಸಿಂಡ್ರೋಮ್ ಎಂಬ ಅಪರೂಪದ ಆನುವಂಶಿಕ ಸಮಸ್ಯೆಯಿಂದ ಬಳಲುತ್ತಿರುವ ರುಮೇಸಾ, ಸಾಮಾನ್ಯವಾಗಿ ಗಾಲಿಕುರ್ಚಿಯನ್ನು ಬಳಸಿ ಪ್ರಯಾಣಿಸುತ್ತಾರೆ.
ಸಾಫ್ಟ್‌ವೇರ್ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಗೆಲ್ಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ. ‘ಇದು ಪ್ರಾರಂಭದಿಂದ ಕೊನೆಯವರೆಗೆ ಉತ್ತಮ ಪ್ರಯಾಣವಾಗಿದೆ. ಇದು ನನ್ನ ಮೊದಲ ವಿಮಾನ ಪ್ರಯಾಣ. ಆದರೆ ಇದು ಖಂಡಿತವಾಗಿಯೂ ನನ್ನ ಕೊನೆಯದಾಗಿರುವುದಿಲ್ಲ….. ನನ್ನ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.’ ಅಂತ ಹೇಳಿದ್ದಾರೆ.