ಎರಡು ವರ್ಷದ ಚಿಹುಆಹುವಾ ತಳಿಯ ಶ್ವಾನವೊಂದು ಜಗತ್ತಿನ ಅತ್ಯಂತ ಪುಟ್ಟ ನಾಯಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
’ಪರ್ಲ್’ ಹೆಸರಿನ ಈ ಶ್ವಾನ, ಜೀವಂತವಿರುವ ಅತ್ಯಂತ ಪುಟ್ಟ ನಾಯಿಯಾಗಿ ಗಿನ್ನೆಸ್ ವಿಶ್ವ ದಾಖಲೆಯ ಪುಸ್ತಕ ಸೇರಿದೆ.
ಸೆಪ್ಟೆಂಬರ್ 1, 2020ರಲ್ಲಿ ಜನಿಸಿದ ಪರ್ಲ್ 9.14 ಸೆಂಮೀ (3.59 ಇಂಚು) ಎತ್ತರವಿದ್ದು, 12.7 ಸೆಂಮೀ ಉದ್ದವಿದೆ.
ದೊಡ್ಡದೊಂದು ಪಾಪ್ಸಿಕಲ್ಗಿಂತಲೂ ಕುಳ್ಳಗಿರುವ ಪರ್ಲ್, ಟಿವಿ ರಿಮೋಟ್ಗಿಂತಲೂ ಪುಟ್ಟದಾಗಿದ್ದು, ಡಾಲರ್ ನೋಟೊಂದರಷ್ಟು ಉದ್ದವಿದೆ.
“ಜಗತ್ತಿನ ಅತ್ಯಂತ ಕುಳ್ಳ ನಾಯಿ ಪರ್ಲ್ಗೆ ಹಲೋ ಎನ್ನಿ,” ಎಂದು ಗಿನ್ನೆಸ್ ವಿಶ್ವ ದಾಖಲೆ ಟ್ವೀಟ್ ಮಾಡಿದೆ.