ದಕ್ಷಿಣ ಚಿಲಿಯ ಕಾಡಿನಲ್ಲಿ, ದೈತ್ಯ ಮರವೊಂದು ಸಾವಿರಾರು ವರ್ಷಗಳಿಂದ ಜೀವಿಸುತ್ತಿದ್ದು, ವಿಶ್ವದ ಅತ್ಯಂತ ಹಳೆಯ ಮರ ಎನಿಸಿಕೊಂಡಿದೆ. “ಹಿರಿಯ ಅಜ್ಜ” ಎಂದು ಕರೆಯಲ್ಪಡುವ ಈ ಮರದ ಕಾಂಡವು ನಾಲ್ಕು ಮೀಟರ್ (13 ಅಡಿ) ವ್ಯಾಸ ಮತ್ತು 28 ಮೀಟರ್ ಎತ್ತರವನ್ನು ಹೊಂದಿದೆ ಎಂದು ನಂಬಲಾಗಿದೆ,
ಈ ಮರವು, ಗ್ರಹವು ಹವಾಮಾನ ಬದಲಾವಣೆಗಳಿಗೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದರ ಕುರಿತು ಬೆಳಕು ಚೆಲ್ಲುವ ವೈಜ್ಞಾನಿಕ ಮಾಹಿತಿಯನ್ನು ಹೊಂದಿದೆ ಎಂದು ನಂಬಲಾಗಿದೆ. 5,000 ವರ್ಷಗಳಿಗಿಂತ ಹೆಚ್ಚು ಹಳೆಯದಾಗಿದೆ ಈ ಮರ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಂಡುಬಂದಿರುವ 4,850-ವರ್ಷ-ಹಳೆಯ ಗ್ರೇಟ್ ಬೇಸಿನ್ ಬ್ರಿಸ್ಲ್‌ಕೋನ್ ಪೈನ್‌ನ ಮೆಥುಸೆಲಾವನ್ನು ಭೂಮಿಯ ಮೇಲಿನ ಅತ್ಯಂತ ಹಳೆಯ ಮರ ಎಂದು ಇದುವರೆಗೆ ಗುರುತಿಸಲಾಗಿತ್ತು.
ಇದರ ದಾಖಲೆಯನ್ನು ಹಿರಿಯ ಅಜ್ಜ ಮುರಿದುಹಾಕಿದೆ. ಅಂದಹಾಗೆ ಈ ಮರವು, ಸ್ಯಾಂಟಿಯಾಗೊದ ದಕ್ಷಿಣಕ್ಕೆ 800 ಕಿಲೋಮೀಟರ್ (500 ಮೈಲುಗಳು) ದಕ್ಷಿಣ ಲಾಸ್ ರಿಯೋಸ್ ಪ್ರದೇಶದ ಕಾಡಿನಲ್ಲಿ ಕಂದರದ ಅಂಚಿನಲ್ಲಿದೆ.