ಜಗತ್ತಿನ ಅತ್ಯಂತ ಹಿರಿಯ ಆಮೆ ಎಂದು ಎನಿಸಿಕೊಂಡಿದ್ದ ಜೋನಾಥನ್ ಭಾನುವಾರ ತನ್ನ 190 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಸೇಂಟ್ ಹೆಲೆನಾದಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ದಕ್ಷಿಣ ಅಟ್ಲಾಂಟಿಕ್ ದ್ವೀಪದ ಗವರ್ನರ್‌ಗೆ ಉಡುಗೊರೆಯಾಗಿ ಬಂದ ಸಮಯದಿಂದ ಜೋನಾಥನ್ ಸಾಕಷ್ಟು ಖ್ಯಾತಿಯನ್ನು ಗಳಿಸಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಅತ್ಯಂತ ಹಿರಿಯ ಆಮೆ ಎಂಬ ಹೆಗ್ಗಳಿಕೆಯನ್ನು ಇದು ಪಡೆದುಕೊಂಡಿದೆ. ಜತೆಗೆ, ಅತ್ಯಂತ ಹಳೆಯ ಜೀವಂತ ಭೂಮಿಯ ಮೇಲಿನ ಪ್ರಾಣಿ ಎಂದೂ ಸ್ಥಾನ ಪಡೆದಿದೆ.
ಇದರ ಮೇಲಿರುವ ಚಿಪ್ಪಿನ ಅಳತೆಗಳ ಆಧಾರದ ಮೇಲೆ ಇದರ ವಯಸ್ಸನ್ನು ಕಂಡುಹಿಡಿಯಲಾಗಿದೆ. 1832ರಂದು ಇದು ಹುಟ್ಟಿರಬಹುದು ಎಂದು ಅಂದಾಜು ಮಾಡಲಾಗಿದೆ. ಇದು 50 ವರ್ಷದ್ದಾಗಿರುವಾಗ ಲಂಡನ್ನ ಸಾಗರೋತ್ತರ ಪ್ರದೇಶಕ್ಕೆ ತರಲಾಯಿತು ಎಂದು ನಂಬಲಾಗಿದೆ.
ಸೇಂಟ್ ಹೆಲೆನಾ ಗವರ್ನರ್ ಅವರ ಅಧಿಕೃತ ನಿವಾಸವಾಗಿರುವ ಪ್ಲಾಂಟೇಶನ್ ಹೌಸ್‌ನಲ್ಲಿ ಆಮೆ ಆರಾಮದಾಯಕ ನಿವೃತ್ತಿ ಜೀವನವನ್ನು ನಡೆಸುತ್ತಿದೆ. ಇದರ ಹುಟ್ಟುಹಬ್ಬಕ್ಕೆ ಕೇಕ್ ಕಟ್ ಮಾಡಲಾಗಿದೆ. ಜತೆಗೆ ಅದಕ್ಕೆ ಇಷ್ಟವಾಗಿರುವ ತಿನಿಸುಗಳನ್ನೂ ಮಾಡಲಾಗಿದೆ.