ಮಾಲಿನ್ಯದ ಕುರಿತು ಇತ್ತೀಚಿಗೆ ಹೊಸ ಅಧ್ಯಯನ ನಡೆದಿದೆ. ಇದರ ಪ್ರಕಾರ, ಸಾಗರಗಳಲ್ಲಿ ತೇಲುತ್ತಿರುವ 171 ಟ್ರಿಲಿಯನ್‌ಗಿಂತಲೂ ಹೆಚ್ಚು ಪ್ಲಾಸ್ಟಿಕ್ ಕಣಗಳಿಂದ ವಿಶ್ವದ ಸಾಗರಗಳು ಕಲುಷಿತವಾಗಿವೆ. ಇದನ್ನು ಒಟ್ಟಿಗೇ ಸಂಗ್ರಹಿಸಿದರೆ, ಸುಮಾರು 2.3 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯವಿದೆ.
ಅಂತರಾಷ್ಟ್ರೀಯ ವಿಜ್ಞಾನಿಗಳ ತಂಡವು 1979 ಮತ್ತು 2019 ರ ನಡುವೆ ಅಟ್ಲಾಂಟಿಕ್, ಪೆಸಿಫಿಕ್ ಮತ್ತು ಭಾರತೀಯ ಸಾಗರಗಳು ಮತ್ತು ಮೆಡಿಟರೇನಿಯನ್ ಸಮುದ್ರದಲ್ಲಿನ ಸುಮಾರು 12,000 ಮಾದರಿಗಳನ್ನು ಸಂಗ್ರಹಿಸಿದ ಜಾಗತಿಕ ಡೇಟಾವನ್ನು ವಿಶ್ಲೇಷಿಸಿದೆ.
ಈ ಅಧ್ಯಯನದ ಪ್ರಕಾರ, 2005 ರಿಂದ ಸಾಗರ ಪ್ಲಾಸ್ಟಿಕ್ ಮಾಲಿನ್ಯವು ಕ್ಷಿಪ್ರಗತಿಯಲ್ಲಿ ಹೆಚ್ಚಿದೆ. ಅಂದಾಜು 82-358 ಟ್ರಿಲಿಯನ್ ಪ್ಲಾಸ್ಟಿಕ್ ಕಣಗಳು 1.1-4.9 ಮಿಲಿಯನ್ ಟನ್‌ಗಳಷ್ಟು ತೂಗುತ್ತವೆ. ‘ 1990 ರವರೆಗೆ ಯಾವುದೇ ಸ್ಪಷ್ಟವಾದ ಚಿತ್ರಣ ಸಿಗಲಿಲ್ಲ. ಆದರೆ 1990ರಿಂದ 2005 ರವರೆಗೆ ಇದರ ಬಗ್ಗೆ ಅಧ್ಯಯನ ಮಾಡಿದಾಗ ಆತಂಕ ಸೃಷ್ಟಿಸಿದೆ’ ಎಂದು ಸಂಶೋಧಕರು ಹೇಳಿದ್ದಾರೆ.