ಸಾಮಾನ್ಯವಾಗಿ ಕಟ್ಟಡಗಳು ಲಂಬಾಕಾರದಲ್ಲಿರುತ್ತವೆ, ಹೆಚ್ಚೆಂದರೆ ಆಕರ್ಷಣೀಯವಾಗಿ ಕಾಣಲು ಒಂದಷ್ಟು ವೈವಿದ್ಯಮಯ ಎಲಿವೇಷನ್ ಮಾಡಲಾಗಿರುತ್ತದೆ.
ಇದೀಗ ಚೈನಾದಲ್ಲಿ ವಿಶ್ವದ ಅತ್ಯಂತ ದೊಡ್ಡ ಟ್ವಿಸ್ಟಿಂಗ್ ಟವರ್ ಅನಾವರಣಗೊಂಡಿದೆ. ಅದರ ಎತ್ತರ ಬರೋಬ್ಬರಿ 580 ಅಡಿಗಳು.
ಈ ಟ್ವಿಸ್ಟಿಂಗ್ ಟವರ್ ಅನ್ನು ಇತ್ತೀಚೆಗೆ ಚಾಂಗ್ಕಿಂಗ್ನಲ್ಲಿ ಅನಾವರಣಗೊಳಿಸಲಾಗಿದೆ. ಗಗನಚುಂಬಿ ಕಟ್ಟಡವನ್ನು ವಾಸ್ತುಶಿಲ್ಪ ಕಂಪನಿ ಏಡಾಸ್ ವಿನ್ಯಾಸಗೊಳಿಸಿದೆ. 39-ಅಂತಸ್ತಿನ ಟ್ವಿಸ್ಟಿಂಗ್ ಟವರ್ ಆ ಪ್ರದೇಶದ ಹೆಗ್ಗುರುತಾಗಿರಬೇಕೆಂದು ಉದ್ದೇಶಿಸಲಾಗಿದೆ. ಡ್ಯಾನ್ಸ್ ಆಫ್ ಲೈಟ್ ಎಂಬ ಅಡ್ಡಹೆಸರು ಅದಕ್ಕಿದೆ.
ಆಕ್ಟಿರ್ಕ್ ಮತ್ತು ಅಂಟಾಕ್ಟಿರ್ಕ್ನಲ್ಲಿ ಸಾಮಾನ್ಯವಾಗಿ ಕಂಡುಬರುವ ಡ್ಯಾನ್ಸಿಂಗ್ ಅರೋರಾ, ಸುರುಳಿಗಳಿಂದ ವಿನ್ಯಾಸಕರು ಸ್ಫೂರ್ತಿ ಪಡೆದಿದ್ದಾರೆ. ಆದ್ದರಿಂದ, ಕಟ್ಟಡದ ಅತಿವಾಸ್ತವಿಕ ತಿರುಚಿದ ಆಕಾರವನ್ನು ಎದ್ದುಕಾಣುವಲ್ಲಿ ಬೆಳಕು ಪ್ರಮುಖ ಪಾತ್ರ ವಹಿಸುತ್ತದೆ.
“ಕನಿಷ್ಠ” ವಿನ್ಯಾಸವು ಗಾಜಿನ ಪ್ಯಾನೆಲ್ಗಳಿಂದ ಪ್ರತಿಫಲನ ಮತ್ತು ವಕ್ರೀಭವನದೊಂದಿಗೆ ಸಂಯೋಜಿಸಿದಾಗ, ಡ್ಯಾನ್ಸರ್ ಆಕೃತಿಯನ್ನು ಸೂಚಿಸುವ ಅದ್ಭುತ ಬೆಳಕಿನ ಪ್ರದರ್ಶನವನ್ನು ವೀಕ್ಷಿಸಬಹುದು.
ಟ್ವಿಸ್ಟಿಂಗ್ ಕಟ್ಟಡಗಳು ಪ್ರಪಂಚದಾದ್ಯಂತ ಸಾಕಷ್ಟು ಇವೆ. ಆದರೂ ಡ್ಯಾನ್ಸ್ ಆಫ್ ಲೈಟ್ ಹಲವು ವಿಶೇಷತೆ ಹೊಂದಿದೆ. 8.8 ಡಿಗ್ರಿಗಳ ಟರ್ನಿಂಗ್ ಆಂಗಲ್ ಇದ್ದು, ಇದು ಇತರ ಗಗನಚುಂಬಿ ಕಟ್ಟಡಗಳಿಗಿಂತ ಸುಮಾರು 1.5 ಪಟ್ಟು ಹೆಚ್ಚು ಎಂದು ಗುರುತಿಸಲಾಗಿದೆ.
ವಿಶ್ವದ ಮೊದಲ ಟರ್ನಿಂಗ್ ಟವರ್ ಸ್ವೀಡನ್ನಲ್ಲಿ ಅನಾವರಣಗೊಗೊಂಡಿತ್ತು, ಅದನ್ನು ದಿ ಟರ್ನಿಂಗ್ ಟೋರ್ಸೊ ಎಂದು ಕರೆದಿದ್ದು, ಸ್ಪ್ಯಾನಿಷ್ ವಾಸ್ತುಶಿಲ್ಪಿ ಸ್ಯಾಂಟಿಯಾಗೊ ಕ್ಯಾಲಟ್ರಾವಾ ವಿನ್ಯಾಸಗೊಳಿಸಿದ ಈ ಅದ್ಭುತ ವಾಸ್ತುಶಿಲ್ಪವನ್ನು 2005 ರಲ್ಲಿ ಮಾಲ್ಮೋದಲ್ಲಿ ನಿರ್ಮಿಸಲಾಗಿತ್ತು.