ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಹಾಗೂ ಸೊಸೆ ಶ್ಲೋಕಾ ಮೆಹ್ತಾ ಅತ್ಯಂತ ದುಬಾರಿ ಮದುವೆ ಲೆಹೆಂಗಾಗಳನ್ನ ಹೊಂದಿದ್ದಾರೆ ಅನ್ನೋದು ಎಲ್ರಿಗೂ ತಿಳಿದಿರೋ ವಿಚಾರ. ಆದರೂ ವಿಶ್ವದ ಅತ್ಯಂತ ದುಬಾರಿ ಬೆಲೆಯ ಲೆಹಂಗಾದ ಎದುರು ಇವರ ಮದುವೆ ಲೆಹೆಂಗಾದ ಬೆಲೆ ಏನೇನೂ ಅಲ್ವಂತೆ..!
ಇಶಾ ಅಂಬಾನಿ ಮದುವೆ ವೆಚ್ಚ ಬರೋಬ್ಬರಿ 700 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿತ್ತು. ಅಲ್ಲದೇ ಇಶಾ ತಮ್ಮ ಮದುವೆ ದಿನದಂದು ಬರೋಬ್ಬರಿ 90 ಕೋಟಿ ರೂಪಾಯಿ ಮೌಲ್ಯದ ವಿಶ್ವದ ಅತ್ಯಂತ ದುಬಾರಿ ಮೌಲ್ಯದ ಲೆಹೆಂಗಾವನ್ನು ಧರಿಸಿ ಸುದ್ದಿಯಾಗಿದ್ದರು. ಆದರೆ ವಿಚಾರ ಏನೆಂದರೆ ಇಶಾ ಧರಿಸಿದ ಚಿನ್ನದ ಲೆಹೆಂಗಾಕ್ಕಿಂತಲೂ ದುಬಾರಿಯಾದ ಲೆಹೆಂಗಾವಿದೆ.
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ , ವಧುವಿನ ಉಡುಪನ್ನು ವಿನ್ಯಾಸ ಮಾಡುವ ವಿನ್ಯಾಸಕ ರೆನೀ ಹಾಗೂ ಸೆಲೆಬ್ರಿಟಿ ಆಭರಣ ವ್ಯಾಪಾರಿ ಮಾರ್ಟಿನ್ ಕಾಡ್ಜ್ ತಯಾರಿಸಿದ ಈ ಲೆಹಂಗಾ ವಜ್ರಗಳನ್ನು ಹೊಂದಿದ್ದು ಇದು ವಿಶ್ವದ ಅತ್ಯಂತ ದುಬಾರಿ ಮದುವೆಯ ಡ್ರೆಸ್ ಆಗಿದೆ.
ಈ ಡೈಮಂಡ್ ವೆಡ್ಡಿಂಗ್ ಡ್ರೆಸ್ನ್ನು ಮಾರ್ಟಿನ್ ಹಾಗೂ ರೇನಿ 2006ರಲ್ಲಿ ವಿನ್ಯಾಸಗೊಳಿಸಿದ್ದಾರೆ. ಈ ಗೌನ್ನ್ನು ಅತ್ಯಂತ ಐಷಾರಾಮಿ ರೇಷ್ಮೆ ಬಟ್ಟೆಯಿಂದ ತಯಾರಿಸಲಾಗಿದೆ. 150 ಕ್ಯಾರಟ್ನ ವಜ್ರಗಳನ್ನು ಈ ಉಡುಪು ಹೊಂದಿದೆ. ಅಂದಹಾಗೆ ಈ ದುಬಾರಿ ಉಡುಪಿನ ಮೌಲ್ಯ ಬರೋಬ್ಬರಿ 99.85 ಕೋಟಿ ರೂಪಾಯಿ ಆಗಿದೆ.