ಅನೇಕ ದೇಶಗಳಲ್ಲಿ ಅತ್ಯಂತ ಜನಪ್ರಿಯ ಖಾದ್ಯವಾದ ಬಿರಿಯಾನಿ ಅಂದರೆ ಜನರಿಗೆ ಅದೆಷ್ಟು ಕ್ರೇಜ್ ಎಂದರೆ, ಈ ಖಾದ್ಯ ತಿನ್ನಲು ಎಷ್ಟು ದೂರ ಬೇಕಾದರೂ ಹೋಗುತ್ತಾರೆ ಹಾಗೂ ದುಬಾರಿ ದುಡ್ಡು ತೆರಲು ಚಿಂತಿಸುವುದಿಲ್ಲ. ಆದರೆ ಚಿನ್ನ ಲೇಪಿತ ಬಿರಿಯಾನಿ ತಿನ್ನಲು 20,000 ರೂ.ಗಳನ್ನು ತೆರುವಂತಾದರೆ…?
ದುಬೈನ ಬಾಂಬೆ ಬರೋ ರೆಸ್ಟೋರೆಂಟ್‌ನಲ್ಲಿ ಜಗತ್ತಿನ ಅತ್ಯಂತ ದುಬಾರಿ ಬಿರಿಯಾನಿ ಮಾರಾಟ ಮಾಡಲಾಗುತ್ತಿದೆ. ರಾಯಲ್ ಗೋಲ್ಡ್ ಬಿರಿಯಾನಿ ಎನ್ನಲಾದ ಈ ಖಾದ್ಯಕ್ಕೆ 1000 ದಿರ್ಹಮ್‌ಗಳ ಬೆಲೆ ಇದೆ. ಅಂದರೆ ಒಂದು ಪ್ಲೇಟ್ ಬಿರಿಯಾನಿಗೆ 19,705.85 ರೂ.ಗಳ ಬೆಲೆ ಇದೆ. ಈ ಬಿರಿಯಾನಿಗೆ 23 ಕ್ಯಾರೆಟ್ ಚಿನ್ನದ ಲೇಪನವಿದೆ.
ದುಬೈ ಅಂತಾರಾಷ್ಟ್ರೀಯ ಫೈನಾನ್ಸ್ ಕೇಂದ್ರದಲ್ಲಿ (ಡಿಐಎಫ್‌ಸಿ) ಇರುವ ಈ ರೆಸ್ಟೋರೆಂಟ್ ಒಳಗೆ ಕುಳಿತರೆ ಬ್ರಿಟಿಷ್ ಬಂಗಲೆಯೊಳಗೆ ಕುಳಿತ ಅನುಭವವಾಗುತ್ತದೆ.
ಒಂದು ಪ್ಲೇಟ್ ಬಿರಿಯಾನಿಯಲ್ಲಿ ಮೂರು ಕೆಜಿಯಷ್ಟು ಅನ್ನ ಹಾಗೂ ಮಾಂಸ ಇರುತ್ತದೆ. ಜೊತೆಯಲ್ಲಿ ಮಟನ್ ಚಾಪ್ಸ್, ಮಾಂಸದುಂಡೆಗಳು, ಗ್ರಿಲ್ ಚಿಕನ್ ಹಾಗೂ ಬಗೆಬಗೆಯ ಕಬಾಬ್‌ಗಳು ಸಿಗುತ್ತವೆ. ಪ್ಲೇಟ್‌ನಲ್ಲಿ ಮೂರು ವಿಧದ ಅಕ್ಕಿ ಇದ್ದು, ಬಿರಿಯಾನಿ ಅಕ್ಕಿ, ಕೀಮಾ ಅಕ್ಕಿ ಹಾಗೂ ಬಿಳಿ & ಕೇಸರಿ ಅಕ್ಕಿಗಳನ್ನು ಹೊಂದಿದೆ.
https://www.instagram.com/p/CLa9j3uJ4Hb/?utm_source=ig_embed