2013ರಲ್ಲಿ ಥಾಯ್ಲೆಂಡ್‌ನ ಭದ್ರತಾ ಸಿಬ್ಬಂದಿ ಮತ್ತು ಅವರ ಪತ್ನಿ 58 ಗಂಟೆ 35 ನಿಮಿಷ 58 ಸೆಕೆಂಡುಗಳ ಕಾಲ ನಿರಂತರವಾಗಿ ಚುಂಬಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಅದರ ವಿಷಯ ಪುನಃ ಈಗ ವೈರಲ್ ಆಗಿದೆ. ಇದಕ್ಕೆ ಕಾರಣ, ಇಲ್ಲಿಯವರೆಗೆ ಈ ದಾಖಲೆಯನ್ನು ಯಾವ ಜೋಡಿಯೂ ಮುರಿದಿಲ್ಲ ಎನ್ನುವುದಕ್ಕೆ.
ಮೂರು ಸಾವಿರ ಡಾಲರ್‌ಗಳಿಗಿಂತ ಹೆಚ್ಚು ಬಹುಮಾನ ಮತ್ತು ಎರಡು ವಜ್ರದ ಉಂಗುರಗಳನ್ನು ಪಡೆದ ಈ ಜೋಡಿ ಅಂದು ದಾಖಲೆ ನಿರ್ಮಿಸಿದಾಗ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈ ಜೋಡಿ ದಾಖಲೆ ನಿರ್ಮಿಸಿದ ಸಮಯದಲ್ಲಿ ಒಣಹುಲ್ಲಿನ ಮೂಲಕ ತಿನ್ನಬೇಕಾಗಿತ್ತು, ನಿದ್ರೆ ಮಾಡಲಿಲ್ಲ ಮತ್ತು ಒಟ್ಟಿಗೆ ಶೌಚಾಲಯಕ್ಕೆ ಹೋಗಬೇಕಾಗಿತ್ತು.
ಸ್ಪರ್ಧೆಯ ನಿಯಮಗಳ ಪ್ರಕಾರ ನಡೆದುಕೊಂಡು ಸುಸ್ತಾಗಿದ್ದ ಜೋಡಿ ಎರಡೂವರೆ ದಿನಗಳ ಕಾಲ ನಿದ್ರೆ ಮಾಡಿರಲಿಲ್ಲ. ಅವರು ತುಂಬಾ ದಣಿದಿದ್ದರು, ಅವರು ಎಲ್ಲಾ ಸಮಯದಲ್ಲೂ ನಿಲ್ಲಬೇಕಾಗಿತ್ತು. ಆದ್ದರಿಂದ ಅವರು ತುಂಬಾ ದುರ್ಬಲರಾಗಿದ್ದರು. ಆದರೂ ದಾಖಲೆ ನಿರ್ಮಿಸಿದ್ದರು.
ಚುಂಬಿಸಿದಾಗ ಮುಖಕ್ಕೆ ರಕ್ತ ನುಗ್ಗಿ ಬರುತ್ತದೆ. ನಿಮ್ಮ ಮುಖಕ್ಕೆ ಹೆಚ್ಚಿನ ರಕ್ತದ ಹರಿವು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಈ ಕಾಲಜೆನ್ ಹಾರ್ಮೋನ್ ಇದೆಯಲ್ಲ, ಇದು ವಯಸ್ಸಾಗುವುದನ್ನು ತಡೆಯುವಂಥ ಹಾರ್ಮೋನ್. ಹೆಚ್ಚಿನ ರಕ್ತದ ಹರಿವು, ರಕ್ತನಾಳಗಳ ಹಿಗ್ಗುವಿಕೆಯ ವೇಳೆ ಕಾಲಜನ್ ಮತ್ತು ಎಲಾಸ್ಟಿನ್ ಉತ್ಪಾದನೆ ಹೆಚ್ಚಾಗುತ್ತದೆ ಎನ್ನಲಾಗಿದೆ.