* ಎಂಟು ಪಥದ ಎಕ್ಸ್ಪ್ರೆಸ್ ವೇಯನ್ನು ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾದಂತೆ 12 ಪಥಗಳಿಗೆ ವಿಸ್ತರಣೆ ಮಾಡಬಹುದು.
* ರೆಸಾರ್ಟ್ಗಳು, ಫುಡ್ಕೋರ್ಟ್ಗಳು, ರೆಸ್ಟೋರೆಂಟ್ಗಳು, ಇಂಧನ ನಿಲ್ದಾಣಗಳು, ಲಾಜಿಸ್ಟಿಕ್ಸ್ ಪಾರ್ಕ್ಗಳು ಹಾಗೂ ಲಾರಿಗಳಿಗೆ ವಿಶೇಷ ಸೌಲಭ್ಯಗಳನ್ನು ಈ ಹೆದ್ದಾರಿ ಒಳಗೊಳ್ಳಲಿದೆ.
* ಅಪಘಾತಕ್ಕೆ ತುತ್ತಾಗುವ ಸಂತ್ರಸ್ತರನ್ನು ಕೂಡಲೇ ಆಸ್ಪತ್ರೆಗೆ ರವಾನೆ ಮಾಡಲು ಹೆಲಿಕಾಪ್ಟರ್ ಆಂಬುಲೆನ್ಸ್ ವ್ಯವಸ್ಥೆ ಒದಗಿಸಲು ಹೆಲಿಪೋರ್ಟ್ಗಳನ್ನು ನಿರ್ಮಿಸಲಾಗುವುದು.
ದೇಶದ ಅತಿ ಅಗಲದ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಪೂರ್ಣ
* ರಸ್ತೆಯ ಇಕ್ಕೆಲಗಳಲ್ಲಿ ಎರಡು ಕೋಟಿಯಷ್ಟು ಸಸಿಗಳನ್ನು ನೆಡಲಾಗುವುದು.
* ಪ್ರಾಣಿಗಳಿಗೆಂದು ವಿಶೇಷವಾದ ಓವರ್ ಪಾಸ್ಗಳನ್ನು ಹೊಂದಿರುವ ಏಷ್ಯಾದ ಮೊದಲ ಹೆದ್ದಾರಿ ಇದಾಗಿರಲಿದೆ.
* ಎಂಟು ಪಥದ ಎರಡು ಸುರಂಗಗಳನ್ನು ಹೆದ್ದಾರಿ ಹೊಂದಲಿದೆ.
* ಯೋಜನೆಯ ಪೂರ್ಣಗೊಂಡಲ್ಲಿ ವಾರ್ಷಿಕ 32 ಕೋಟಿ ಲೀಟರ್ ಇಂಧನ ಉಳಿತಾಯವಾಗಲಿದ್ದು, 85 ಕೋಟಿ ಕೆಜಿಗಳಷ್ಟು ಇಂಗಾಲದ ಹೊರಸೂಸುವಿಕೆ ತಗ್ಗಲಿದೆ.
* ಯೋಜನೆಗೆಂದು 12 ಲಕ್ಷ ಟನ್ಗಳಷ್ಟು ಉಕ್ಕು ಬಳಸಲಾಗಿದೆ. ಇದೇ ವೇಳೆ 80 ಲಕ್ಷ ಟನ್ಗಳಷ್ಟು ಕಾಂಕ್ರೀಟ್ ಬಳಸಲಾಗಿದೆ. ಇದು ದೇಶದಲ್ಲಿ ಉತ್ಪತ್ತಿಯಾಗುವ ಸಿಮೆಂಟ್ನ ವಾರ್ಷಿಕ ಪ್ರಮಾಣದ 2%ನಷ್ಟಾಗಿದೆ.
* ತರಬೇತಿ ಹೊಂದಿದೆ ಸಾವಿರಾರು ಸಿವಿಲ್ ಇಂಜಿನಿಯರ್ಗಳು ಹಾಗೂ ದಿನಗೂಲಿ ನೌಕರರಿಗೆ ಉದ್ಯೋಗ ಸೃಷ್ಟಿಸಿರುವ ಹೆದ್ದಾರಿ ಯೋಜನೆಯಿಂದ 50 ಲಕ್ಷದಷ್ಟು ಮಾನವಗಂಟೆಗಳ ಶ್ರಮದ ಅಗತ್ಯ ಸೃಷ್ಟಿಯಾಗಿದೆ.
* 1,380 ಕಿಮೀ ಉದ್ದದ ಈ ಹೆದ್ದಾರಿಯ 1,200 ಕಿಮೀನಷ್ಟು ನಿರ್ಮಾಣ ಕಾರ್ಯದ ಕಾಂಟ್ರಾಕ್ಟ್ಗಳನ್ನು ಅದಾಗಲೇ ಹಂಚಲಾಗಿದ್ದು ಕೆಲಸ ಪ್ರಗತಿಯಲ್ಲಿದೆ.
* ರಸ್ತೆ ನಿರ್ಮಾಣಕ್ಕಾಗಿ ಹೆದ್ದಾರಿ ಹಾದು ಹೋಗುವ ಎಲ್ಲಾ ರಾಜ್ಯಗಳಲ್ಲೂ ಒಟ್ಟಾರೆ 15,000 ಹೆಕ್ಟೇರ್ ಭೂಮಿ ಸ್ವಾಧೀನಕ್ಕೆ ಪಡೆಯಲಾಗಿದೆ.