ವಾಷಿಂಗ್ಟನ್: ನೀವು ಎಂದಾದರೂ ಕಾರ್ ನಲ್ಲಿ ಹಾರಾಟ ನಡೆಸುವ ಕನಸು ಹೊಂದಿದ್ದರೆ ನಿಮ್ಮ ಕನಸು ಶೀಘ್ರದಲ್ಲೇ ನನಸಾಗುವ ದಿನ ಸಮೀಪಿಸಿದೆ.
ಗಂಟೆಗೆ 100 ಮೈಲುಗಳಷ್ಟು ಬೇಗವಾಗಿ ಚಲಿಸಬಲ್ಲ ಮತ್ತು 10 ಸಾವಿರ ಅಡಿಗಳಷ್ಟು ಎತ್ತರದಲ್ಲಿ ಹಾರಬಲ್ಲ ವಿಶ್ವದ ಮೊದಲ ಹಾರುವ ಕಾರ್ ಟೇಕಾಫ್ ಮಾಡಲು ಅಮೆರಿಕದ ಫೆಡರಲ್ ಏವಿಯೇಷನ್ ಅಥಾರಿಟಿ ಅಧಿಕೃತ ಅನುಮತಿ ಪಡೆದುಕೊಂಡಿದೆ.
ಏರ್ಕ್ರಾಫ್ಟ್ ವಾಯು ಯೋಗ್ಯತೆಯ ಪ್ರಮಾಣಪತ್ರವನ್ನು ನೀಡಿದ್ದು, ವಿಮಾನ ಹಾರಾಟದ ಮಾನದಂಡಗಳನ್ನು ಪೂರೈಸಲಾಗಿದೆ. ಅಂದ ಹಾಗೆ, ಹಾರುವ ಕಾರ್ ಇನ್ನು ರಸ್ತೆಯಲ್ಲಿ ಸಂಚರಿಸಲು ಅನುಮತಿ ಸಿಕ್ಕಿಲ್ಲ. ಅದು ಕೂಡ ಶೀಘ್ರವೇ ಸಿಗಲಿದೆ.
ಈ ಕಾರು ಗ್ಯಾರೇಜ್ ಒಳಗೆ ನಿಲ್ಲಿಸಲು ಸಾಧ್ಯವಾಗುವಂತೆ ಸಣ್ಣ ಗಾತ್ರಕ್ಕೆ ಮಡಚಿಕೊಳ್ಳುತ್ತದೆ. ರಸ್ತೆಯಲ್ಲಿ ಕಾರಿನ ರೀತಿ ಸಂಚರಿಸಲಿದ್ದು, ಬಳಿಕ ಹಾರಾಟಕ್ಕೆ ಅನುಕೂಲವಾಗುವಂತೆ ರೆಕ್ಕೆ ತೆರೆದುಕೊಳ್ಳುತ್ತದೆ. ಅಂದ ಹಾಗೆ, ಈ ಕಾರನ್ನು 2022 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ.