ದಶಕಗಟ್ಟಲೆ ಸ್ನಾನ ಮಾಡದೆ ವಿಶ್ವದ ಅತಿ ಕೊಳಕು ಮನುಷ್ಯ ಎಂದು ಬಿರುದಾಂಕಿತನಾಗಿದ್ದ ಇರಾನಿನ ಅಮೌ ಹಾಜಿ ವಿಧಿವಶರಾಗಿದ್ದಾರೆ.
94 ವರ್ಷದ ಈ ವ್ಯಕ್ತಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಫಾರ್ಸ್ ನ ದಕ್ಷಿಣ ಪ್ರಾಂತ್ಯದ ದೇಜ್ ಗೆ ಗ್ರಾಮದಲ್ಲಿ ಮೃತಪಟ್ಟಿದ್ದಾರೆ ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ.
ಸ್ನಾನ ಮಾಡಿದರೆ ತನಗೆ ರೋಗ ಬರುತ್ತದೆ ಎಂಬ ವಿಚಿತ್ರ ಭೀತಿಯಿಂದ ಬಳಲುತ್ತಿದ್ದ ಈತ ಕಳೆದ 50 ವರ್ಷಗಳಿಂದ ಸ್ನಾನವನ್ನೇ ಮಾಡಿರಲಿಲ್ಲ ಎಂದು ಹೇಳಲಾಗಿದೆ. ಆದರೆ ಕೆಲ ತಿಂಗಳ ಹಿಂದೆ ಗ್ರಾಮಸ್ಥರು ಬಲವಂತವಾಗಿ ಕರೆದೊಯ್ದು ಸ್ನಾನ ಮಾಡಿಸಿದ್ದರು ಎನ್ನಲಾಗಿದೆ.