ಪ್ರಪಂಚ ಸುತ್ತಬೇಕು ಅನ್ನೋ ಆಸೆ ಸಹಜ. ಆದರೆ ಜಗತ್ತಿನ ಕೆಲವೊಂದು ಪ್ರದೇಶಗಳಿಗೆ ಪ್ರವಾಸ ಹೋದರೆ ಅಲ್ಲಿಂದ ಶವವಾಗಿಯೇ ವಾಪಸ್ ಬರಬಹುದು. ಅಂತಹ ಹತ್ತಾರು ಅಪಾಯಕಾರಿ ತಾಣಗಳಿವೆ. ಇಲ್ಲಿ ಬದುಕುವುದು ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಕಷ್ಟ. ಅಪಾಯದೊಂದಿಗೆ ಆಟವಾಡಲು ಬಯಸುವವರು ಈ 6 ಸ್ಥಳಗಳಿಗೆ ಭೇಟಿ ನೀಡಬಹುದು.
ಡೆತ್ ರೋಡ್
ಈ ಡೆತ್ ರೋಡ್ ಬೊಲಿವಿಯಾದಲ್ಲಿದೆ. ಇದನ್ನು “ಯುಂಗಾಸ್ ರಸ್ತೆ” ಎಂದೂ ಕರೆಯುತ್ತಾರೆ. ಇದು ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ. ತುಂಬಾ ಕಿರಿದಾದ ಮತ್ತು ಕಡಿದಾದ ಈ ರಸ್ತೆಯಲ್ಲಿ ಪ್ರಯಾಣಿಸುವುದು ಸಾವಿನೊಂದಿಗೆ ಸೆಣಸಿದಂತೆ. 1994ರವರೆಗೆ ಇಲ್ಲಿ ಪ್ರತಿ ವರ್ಷ 300 ವಾಹನ ಚಾಲಕರು ಸಾವನ್ನಪ್ಪುತ್ತಿದ್ದರು.
ಸ್ನೇಕ್ ಐಲ್ಯಾಂಡ್
ಬ್ರೆಜಿಲ್ ಕರಾವಳಿಯಲ್ಲಿರುವ “ಎಸ್ಟಾಡೊ ಡಾ ಕಾರ್ಟೆಸ್” ಎಂದೂ ಕರೆಯಲ್ಪಡುವ ಸ್ನೇಕ್ ಐಲ್ಯಾಂಡ್ ವಿಷಕಾರಿ ಹಾವುಗಳಿಂದ ತುಂಬಿದೆ. ಬ್ರೆಜಿಲ್ ಸರ್ಕಾರ ಇಲ್ಲಿಗೆ ಹೋಗದಂತೆ ನಿಷೇಧ ಹೇರಿದೆ.
ಲೇಕ್ ನಾಟ್ರಾನ್
ತಾಂಜಾನಿಯಾದಲ್ಲಿರುವ ನ್ಯಾಟ್ರಾನ್ ಸರೋವರವು ಹೆಚ್ಚು ಲವಣಯುಕ್ತವಾಗಿದೆ. ಇಲ್ಲಿನ ಬಿಸಿ ವಾತಾವರಣವನ್ನು ಸಹಿಸುವುದು ಅಸಾಧ್ಯ. ಸರೋವರದ ನೀರು ಕೂಡ ಕೆಂಪಗಿದೆ. ಈ ಸರೋವರವು ತುಂಬಾ ಉಪ್ಪಾಗಿರುತ್ತದೆ, ಹಾಗಾಗಿ ಅದರಲ್ಲಿ ವಾಸಿಸುವ ಜೀವಿಗಳು ಸಾಯುತ್ತವೆ. ಇಲ್ಲಿನ ನೀರು ತುಂಬಾ ಬಿಸಿಯಾಗಿರುವುದರಿಂದ ಚರ್ಮ ಕೂಡ ಸುಟ್ಟು ಹೋಗಬಹುದು.
ಒಮಿಯಾಕೋನ್
ರಷ್ಯಾದ ಒಮಿಯಾಕಾನ್, ಭೂಮಿಯ ಮೇಲಿನ ಅತ್ಯಂತ ತಂಪಾದ ಸ್ಥಳವಾಗಿದೆ. ಇಲ್ಲಿ ತಾಪಮಾನವು ಚಳಿಗಾಲದಲ್ಲಿ -50 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ಇಲ್ಲಿನ ಚಳಿ ಎಷ್ಟರಮಟ್ಟಿಗಿದೆಯೆಂದರೆ ಜನರು ಬದುಕುವುದೇ ಕಷ್ಟ.
ಡೆತ್ ವ್ಯಾಲಿ
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಡೆತ್ ವ್ಯಾಲಿ ಅತ್ಯಂತ ಬಿಸಿಯಾದ ತಾಪಮಾನಕ್ಕೆ ಹೆಸರುವಾಸಿಯಾಗಿದೆ. 2018 ರಲ್ಲಿ ಇದನ್ನು ವಿಶ್ವದ ಅತ್ಯಂತ ಬಿಸಿಯಾದ ಸ್ಥಳವೆಂದು ಗುರುತಿಸಲಾಗಿತ್ತು ಬಿಸಿಲ ತಾಪದಿಂದ ಇಲ್ಲಿ ಬದುಕುವುದು ತುಂಬಾ ಕಷ್ಟ.
ಸ್ಕೆಲಿಟನ್ ಕೋಸ್ಟ್
ನಮೀಬಿಯಾದ ಈ ಸ್ಥಳ ವಿಪರೀತ ಶೀತ ಮತ್ತು ಗಾಳಿಯನ್ನು ಹೊಂದಿದೆ.ಇಲ್ಲಿ ಮಾನವರು ಮತ್ತು ಪ್ರಾಣಿಗಳ ಅಸ್ಥಿಪಂಜರಗಳೇ ತುಂಬಿವೆ. ಹಾಗಾಗಿ ಇದನ್ನು ಸ್ಕೆಲಿಟನ್ ಕರಾವಳಿ ಎಂದೇ ಕರೆಯಲಾಗುತ್ತದೆ. ಇಲ್ಲಿನ ಕಠಿಣ ಹವಾಮಾನ ಮತ್ತು ಸಮುದ್ರದ ಪ್ರವಾಹಗಳಿಂದಾಗಿ ಜೀವನ ನಡೆಸುವುದು ಕಷ್ಟಕರವಾಗಿದೆ.