
ಎರಡು ಮಹಾಯುದ್ಧಗಳನ್ನು ನೋಡಿರುವ ಜಗತ್ತು ಮತ್ತೊಂದು ಮಹಾಯುದ್ಧವನ್ನು ಶೀಘ್ರದಲ್ಲೇ ನೋಡಲಿದೆಯಾ ? ಯಾಕಂದ್ರೆ ಈಗಾಗ್ಲೇ ರಷ್ಯಾ ಮತ್ತು ಉಕ್ರೇನ್, ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಯುದ್ಧ ವರ್ಷಗಟ್ಟಲೆ ಸಾಗುತ್ತಿದ್ದು ಅನೇಕರ ಪ್ರಾಣ ಹೋಗುತ್ತಿದೆ. ಇದೇ ಮೂರನೇ ವಿಶ್ವಯುದ್ಧದಂತೆ ಕಂಡರೂ ಮೂರನೇ ಮಹಾಯುದ್ಧ ಶೀಘ್ರದಲ್ಲೇ ನಡೆಯಲಿದೆ ಎಂದು ಭಾರತೀಯ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
ಈಗಾಗ್ಲೇ ನಾಸ್ಟ್ರಾಡಾಮಸ್ ಮತ್ತು ಬಾಬಾ ವಂಗಾ ಸೇರಿದಂತೆ ಅನೇಕ ಜ್ಯೋತಿಷಿಗಳು ವಿಶ್ವಯುದ್ಧದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಆದರೆ ಅದರ ಸಾಧ್ಯತೆಯು ಅನಿಶ್ಚಿತವಾಗಿಯೇ ಉಳಿದಿದೆ. ಆದರೂ, ಈ ಭವಿಷ್ಯವಾಣಿಯ ಸರಣಿಯಲ್ಲಿ ಭಾರತೀಯ ಜ್ಯೋತಿಷಿ ಕುಶಾಲ್ ಕುಮಾರ್ ಸಹ ಇತ್ತೀಚಿಗೆ ವಿಶ್ವಯುದ್ಧದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇವರನ್ನು ಹೊಸ ‘ನಾಸ್ಟ್ರಾಡಾಮಸ್’ ಎಂದು ಕರೆಯಲಾಗುತ್ತದೆ. ಇವರು ಮೂರನೇ ಮಹಾಯುದ್ಧದ ಆರಂಭದ ನಿಖರ ದಿನಾಂಕವನ್ನು ಭವಿಷ್ಯ ನುಡಿದಿದ್ದಾರೆ.
ಈ ಭಾರತೀಯ ಜ್ಯೋತಿಷ್ಯ ಯಾರು ?
ಈ ಜ್ಯೋತಿಷಿಯ ಹೆಸರು ಕುಶಾಲ್ ಕುಮಾರ್. ಅವರು ಪ್ರಪಂಚದ ಕೆಲವು ಘಟನೆಗಳನ್ನು ಊಹಿಸುತ್ತಾರೆ ಎಂದು ಹೇಳಿಕೊಳ್ಳುತ್ತಾರೆ. ಇದಕ್ಕಾಗಿ ಅವರು ವೈದಿಕ ಜ್ಯೋತಿಷ್ಯ ಚಾರ್ಟ್‌ನ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಹಿಂದೂ ಸಂಸ್ಕೃತಿಯಲ್ಲಿ ಜನಪ್ರಿಯವಾಗಿರುವ ವೈದಿಕ ಜ್ಯೋತಿಷ್ಯ ಚಾರ್ಟ್‌ಗಳನ್ನು “ನಮ್ಮ ಕರ್ಮದ ನಕ್ಷೆ” ಎಂದು ಪರಿಗಣಿಸಲಾಗುತ್ತದೆ. ಇಸ್ರೇಲ್ ಮತ್ತು ಹಮಾಸ್, ರಷ್ಯಾ ಮತ್ತು ನ್ಯಾಟೋ, ಚೀನಾ ಮತ್ತು ತೈವಾನ್ ನಡುವೆ ಉದ್ವಿಗ್ನತೆ ಹೆಚ್ಚಾಗಬಹುದು ಎಂದು ಕುಶಾಲ್ ಈ ಹಿಂದೆ ಭವಿಷ್ಯ ನುಡಿದಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ಕುಶಾಲ್ ಕುಮಾರ್ “ಜೂನ್ 18, 2024 ರಂದು 3 ನೇ ಮಹಾಯುದ್ಧ ನಡೆಯಲಿದೆ ಎಂದು ಹೇಳಿದ್ದಾರೆ. ಆದರೂ ಇದು ಜೂನ್ 10 ಮತ್ತು 29 ರ ನಡುವೆಯೂ ಸಂಭವಿಸಲು ಪ್ರಬಲವಾದ ಗ್ರಹಗಳ ಪ್ರಚೋದನೆಯಾಗಿದೆ ಎಂದಿದ್ದಾರೆ.