alex Certify ಇಂದು ́ವಿಶ್ವ ಪ್ರವಾಸೋದ್ಯಮ ದಿನʼ : ಏನಿದರ ಮಹತ್ವ ? ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ́ವಿಶ್ವ ಪ್ರವಾಸೋದ್ಯಮ ದಿನʼ : ಏನಿದರ ಮಹತ್ವ ? ಇಲ್ಲಿದೆ ಮಾಹಿತಿ

Tourism Awareness Week 2023 to Focus on Tourism and Green Investments

ಇಡೀ ಜಗತ್ತನ್ನೇ ಸುತ್ತಬೇಕು ಅನ್ನೋದು ಬಹುತೇಕರ ಕನಸು. ವಿಭಿನ್ನ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳು ಹಾಗೂ ವಿವಿಧ ದೇಶಗಳ ಜನರ ದೃಷ್ಟಿಕೋನಗಳನ್ನ ಅರ್ಥಮಾಡಿಕೊಳ್ಳೋದು ನಿಜಕ್ಕೂ ಒಂದು ಒಳ್ಳೆಯ ಹವ್ಯಾಸವೇ ಸರಿ.

ಇಂದು ವಿಶ್ವ ಪ್ರವಾಸೋದ್ಯಮ ದಿನವಾಗಿದೆ. ಹೀಗಾಗಿ ವಿವಿಧ ಪ್ರದೇಶಗಳಿಗೆ ಭೇಟಿ ಕೊಟ್ಟು ಅಲ್ಲಿನ ವಾತಾವರಣವನ್ನು ತಿಳಿದುಕೊಳ್ಳವವರ ಪಾಲಿಗೆ ಈ ದಿನ ಒಂದು ರೀತಿಯಲ್ಲಿ ಸೆಲಿಬ್ರೇಶನ್​ ಅಂತಾ ಹೇಳಿದ್ರೆ ತಪ್ಪಾಗೋದಿಲ್ಲ.

ಪ್ರಪಂಚದಾದ್ಯಂತ ಪ್ರವಾಸೋದ್ಯಮದ ಪ್ರಾಮುಖ್ಯತೆಯನ್ನು ಉತ್ತೇಜಿಸಲು ಹಾಗೂ ಪ್ರಯಾಣಕ್ಕೆ ಸಂಬಂಧಿಸಿದ ಸಂತೋಷದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಕೆಲವೊಂದು ವಿಚಾರಗಳನ್ನು ನಾವು ನೆನಪಿನಲ್ಲಿಟ್ಟುಕೊಳ್ಳಲೇಬೇಕು.

ಪ್ರತಿ ವರ್ಷ, ವಿಶ್ವ ಪ್ರವಾಸೋದ್ಯಮ ದಿನವನ್ನು ಸೆಪ್ಟೆಂಬರ್ 27 ರಂದು ಆಚರಿಸಲಾಗುತ್ತದೆ. ಈ ವರ್ಷ, ವಿಶೇಷ ದಿನವು ಬುಧವಾರದಂದು ಬಂದಿದೆ.

ಹಿನ್ನೆಲೆ : ವಿಶ್ವ ಪ್ರವಾಸೋದ್ಯಮ ಸಂಸ್ಥೆಯು 1979 ರಲ್ಲಿ ವಿಶ್ವ ಪ್ರವಾಸೋದ್ಯಮ ದಿನ ಆಚರಣೆ ಮಾಡುವುದನ್ನು ಘೋಷಣೆ ಮಾಡಿದೆ. 1980ರಿಂದ ಅಧಿಕೃತವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ಪ್ರತಿಮೆಗಳನ್ನು ಅಳವಡಿಸಿಕೊಂಡಿದ್ದು, ಅಂದಿನಿಂದ ಸೆಪ್ಟೆಂಬರ್​ 27ನ್ನು ವಿಶ್ವ ಪ್ರವಾಸೋದ್ಯಮ ದಿನವಾಗಿ ಆಚರಿಸಲಾಗುತ್ತಿದೆ.

ಈ ವರ್ಷ ವಿಶ್ವ ಪ್ರವಾಸೋದ್ಯಮ ದಿನದ ಥೀಮ್​, ಪ್ರವಾಸೋದ್ಯಮ ಹಾಗೂ ಹಸಿರು ಹೂಡಿಕೆಗಳು ಎಂದಾಗಿದೆ. ಪ್ರವಾಸೋದ್ಯಮ ಬೆಳೆಯಬೇಕು ಅಂದರೆ ಹೂಡಿಕೆ ಮಾಡುವುದು ಕೂಡ ಅಷ್ಟೇ ಮುಖ್ಯ ಅನ್ನೋದು UNWTO ಅಭಿಪ್ರಾಯವಾಗಿದೆ. ವಿಶ್ವ ಪ್ರವಾಸೋದ್ಯಮ ದಿನದಂದು ಅಂತಾರಾಷ್ಟ್ರೀಯ ಸಮುದಾಯ. ಬಹುಪಕ್ಷೀಯ ಹಣಕಾಸು ಸಂಸ್ಥೆಗಳು ಹಾಗೂ ಖಾಸಗಿ ವಲಯದ ಹೂಡಿಕೆಗಾರರನ್ನು ಒಗ್ಗೂಡಿಸಲು ಕರೆ ನೀಡಲಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...