alex Certify ಇಂದು ʼವಿಶ್ವ ಹಿರಿಯ ನಾಗರಿಕರ ದಿನʼ : ಅವರ ‌ʼಆರೋಗ್ಯʼ ಕ್ಕೆ ನೆರವಾಗಲು ಇಲ್ಲಿದೆ ಟಿಪ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ʼವಿಶ್ವ ಹಿರಿಯ ನಾಗರಿಕರ ದಿನʼ : ಅವರ ‌ʼಆರೋಗ್ಯʼ ಕ್ಕೆ ನೆರವಾಗಲು ಇಲ್ಲಿದೆ ಟಿಪ್ಸ್‌

ಇಂದು ವಿಶ್ವ ಹಿರಿಯ ನಾಗರಿಕರ ದಿನ. ಈ ದಿನ ಹಿರಿಯರ ಸಮರ್ಪಣೆ, ಸಾಧನೆಗಳು ಮತ್ತು ಅವರ ಜೀವನದುದ್ದಕ್ಕೂ ಸಲ್ಲಿಸಿದ ಸೇವೆಗಳಿಗೆ ನಮ್ಮ ಮೆಚ್ಚುಗೆಯನ್ನು ತೋರಿಸಲು ಅವಕಾಶವನ್ನು ಒದಗಿಸುತ್ತದೆ. ನೀವು ನಿಮ್ಮ ಅಜ್ಜ – ಅಜ್ಜಿ ಸೇರಿದಂತೆ ಹಿರಿಯ ವಯಸ್ಕರ ಜೊತೆ ಹಿರಿಯ ನಾಗರಿಕ ದಿನವನ್ನು ಆಚರಣೆ ಮಾಡಬಹುದು. ಅತ್ಯುತ್ತಮವಾದದ್ದನ್ನು ನೀಡಲು ಹಿರಿಯರು ತಮ್ಮ ಇಡೀ ಜೀವನವನ್ನು ಸವೆಸಿರುತ್ತಾರೆ. ಜೀವನದ ಕೊನೆ ಹಂತದಲ್ಲಿ ಅವರಿಗೆ ಸಂತೋಷ, ಮಾನಸಿಕ ಹಾಗೂ ದೈಹಿಕ ಆರೋಗ್ಯ ನೀಡುವುದು ನಮ್ಮ ಕರ್ತವ್ಯ. ಅವರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯುವಕರಾದ ನಮ್ಮ ಸಹಾಯ, ಸಲಹೆ ಅತ್ಯಗತ್ಯ.

ಮನೆಯಲ್ಲಿರುವ ಹಿರಿಯ ನಾಗರಿಕರಿಗೆ ಪ್ರತಿ ದಿನ ವಾಕಿಂಗ್‌ ಮಾಡುವಂತೆ ಸಲಹೆ ನೀಡಿ. ಅವರನ್ನು ನೀವು ವಾಕಿಂಗ್‌ ಗೆ ಕರೆದುಕೊಂಡು ಹೋಗ್ಬಹುದು. ವಾಕಿಂಗ್‌ ಅವರ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಜೊತೆಗೆ ಅವರ ಸ್ನಾಯುಗಳು ಶಕ್ತಿ ಪಡೆಯಲು ಸಹಾಯವಾಗುತ್ತವೆ.

ಮನೆಯಲ್ಲಿಯೇ ಅವರಿಗೆ ವ್ಯಾಯಾಮ ಮಾಡುವಂತೆ ಸೂಚನೆ ನೀಡಬೇಕು. ಕುಳಿತಲ್ಲಿಯೇ ಕೈಗಳನ್ನು ಎತ್ತುವುದು ಅಥವಾ ಕಡಿಮೆ ಭಾರದ ವಸ್ತುಗಳನ್ನು ಎತ್ತುವುದು ಸೇರಿದಂತೆ ಸಣ್ಣ ಹಾಗೂ ಅವರಿಗೆ ಸಾಧ್ಯವಾಗುವ ವ್ಯಾಯಾಮವನ್ನು ನೀವು ಕಲಿಸಬೇಕು.

ಕೆಲಸದಲ್ಲಿ ಬ್ಯುಸಿ ಇರುವ ಜನರು, ತಮ್ಮ ಪಾಲಕರು, ಅಜ್ಜ – ಅಜ್ಜಿಯ ಆಸೆಯನ್ನು ನಿರ್ಲಕ್ಷ್ಯ ಮಾಡ್ತಾರೆ. ಅವರ ಬಳಿ ಕುಳಿತು ಮಾತನಾಡಲು ಇವರಿಗೆ ಸಮಯವಿರೋದಿಲ್ಲ. ಆದ್ರೆ ನಮ್ಮ ಹಿರಿಯರು ನೆಮ್ಮದಿಯಾಗಿರಬೇಕೆಂದ್ರೆ ಅವರ ಜೊತೆ ನೀವು ಮಾತನಾಡುವುದು ಅಗತ್ಯ. ಅವರನ್ನು ಸಾಧ್ಯವಾದ್ರೆ ಸಾರ್ವಜನಿಕ ಸ್ಥಳಗಳಿಗೆ ಕರೆದೊಯ್ಯಿರಿ. ಸ್ನೇಹಿತರ ಜೊತೆ ಅವರು ಮಾತನಾಡಲು ಅನುಕೂಲ ಮಾಡಿಕೊಡಿ.

ಉಸಿರಾಟದ ವ್ಯಾಯಾಮ, ಧ್ಯಾನ ಸೇರಿದಂತೆ ಯೋಗದ ಅಭ್ಯಾಸವನ್ನು ಅವರು ರೂಢಿಸಿಕೊಳ್ಳಲು ನೆರವಾಗಿ. ಹಾಗೆಯೇ ಅವರು ಇಷ್ಟಪಡುವ ಹವ್ಯಾಸಗಳನ್ನು ಮಾಡಲು ಪ್ರೋತ್ಸಾಹಿಸಿ. ಅವರು ಮಾನಸಿಕವಾಗಿ ಆದಷ್ಟು ಖುಷಿಯಾಗಿರುವಂತೆ ನೋಡಿಕೊಳ್ಳಿ.

ಆಗಾಗ ವೈದ್ಯರನ್ನು ಭೇಟಿಯಾಗಲು ಅವರಿಗೆ ಸಲಹೆ ನೀಡಿ.  ಅವರ ಕೊಲೆಸ್ಟ್ರಾಲ್‌, ಶುಗರ್‌, ಬಿಪಿ ಸೇರಿದಂತೆ ಸಾಮಾನ್ಯ ಪರೀಕ್ಷೆಗಳನ್ನು ಮಾಡಿಸಿ, ಆರೋಗ್ಯಕರ ಆಹಾರ ಸೇವನೆಗೆ ಪ್ರೋತ್ಸಾಹ ನೀಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...